ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ವರ್ಷ ರಾಜ್ಯವನ್ನು ಮುನ್ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಗೂ ರಾಜೀನಾಮೆ ನೀಡಲಿದ್ದಾರೆ. ಇಂದು ನಡೆದ ಸಾಧನಾ ಸಮಾವೇಶದಲ್ಲಿ ಮಹಾ ಭಾಷಣ ಮಾಡುವ ವೇಳೆ ಭಾವುಕರಾದ ಬಿ.ಎಸ್. ಯಡಿಯೂರಪ್ಪ ಕಣ್ಣಿರಿಡುತ್ತಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಸಾಧನಾ ಸಮಾವೇಶದ ಬಳಿಕ ರಾಜಭವಕ್ಕೆ ಹೋಗಿ ಮುಖಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಸಿಎಂ ಬಿಜೆಪಿ ವರಿಷ್ಠರಿಗೆ ಅಭಿನಂದನೆಯ ಮಹಾಪುರವನ್ನೇ ಹರಿಸಿದ್ರು.