ಮೈಸೂರು: ವಿಜಯೇಂದ್ರ ಮರಿಯಾನೆ ಅಲ್ಲ, ಆನೆ ರೂಪದಲ್ಲಿರೋ ಬೇರೆಯೇ ಪ್ರಾಣಿ. ಆನೆಗೆ ಅದರದೆ ಆದ ಘನತೆ ಇದೆ. ಆದರೆ ಇದು ಬೇರೆ ಪ್ರಾಣಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,
ನಾಡದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ರಾಜ್ಯದ ಜನರಿಗೆ ಮೋಸ ಮಾಡುತ್ತಿರುವ ಸಂಹಾರ ಆಗಲಿದೆ. ಎಲ್ಲವೂ ನಾಡದೇವಿಯ ಇಚ್ಚೆಯಂತೆ ನಡೆಯಲಿದೆ. ಅಕ್ರಮ ಮಾಡಿದ ದುಷ್ಟರು ಯಾರು ಉಳಿಯಲ್ಲ ಎಂದರು. ಇನ್ನು ರಮೇಶ್ ಜಾರಕಿಹೊಳಿ ಅವರನ್ನು ಸಿಲುಕಿಸಿದಂತೆ ನನ್ನನ್ನು ಕಟ್ಟಿ ಹಾಕಲು ಆಗಲ್ಲ. ನಾನು ಎಲ್ಲಾ ಯುದ್ಧ ಕಲೆಗಳನ್ನ ಬಲ್ಲವನು. ನಾನು ಯುದ್ಧದಲ್ಲಿ ಅರ್ಜುನನ ಪಾತ್ರ ವಹಿಸುತ್ತೇನೆ. ಅಭಿಮಾನ್ಯುವಾಗಿ ಸಿಕ್ಕಿ ಹಾಕಿಕೊಳ್ಳಲ್ಲ ಎಂದು ಹೇಳಿದ್ದಾರೆ.