ಕೂಗು ನಿಮ್ಮದು ಧ್ವನಿ ನಮ್ಮದು

ನಾನು ಅಧಿಕಾರವನ್ನು ಸ್ವೀಕರಿಸಿದ ನಂತರ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ: ಸಿಎಂ ಅಳಲು

ಬೆಂಗಳೂರು: ನಾನು ಅಧಿಕಾರವನ್ನು ಸ್ವೀಕರಿಸಿದ ನಂತರ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಎಂದು ಸಿಎಂ ಬಿ.ಎಸ್.ವೈ ಅವರು ನಿರ್ಗಮನದ ಕೊನೆಯ ದಿನ ತಮ್ಮ ಮನದ ಅಳಲನ್ನು ತೋಡಿಕೊಂಡ್ರು.ಇನ್ನೂ ನಾನು ಸಿಎಂ ಆಗಿ ೨ ವರ್ಷದಲ್ಲಿ ಎದುರಿಸಿದ ಸವಾಲುಗಳ ಕುರಿತು ಮಾತನಾಡಿದ ಬಿ.ಎಸ್ ವೈ, ಅಧಿಕಾರಕ್ಕೆ ಬಂದ ಮೇಲೆ ಬಹಳ ಸವಾಲುಗಳನ್ನು ಎದುರಿಸಿದ್ದೇನೆ. ಹಿಂದೆಂದೂ ಕಾಣದಂತಹ ಪ್ರಕೃತಿ ವಿಕೋಪ, ಕೋವಿಡ್ ಎಂಬ ಸಾಂಕ್ರಾಮಿಕ ರೋಗದಿಂದ ಎಲ್ಲರ ಬದುಕು ಅಲ್ಲೋಲ-ಕಲ್ಲೋಲವಾಯಿತು.

ಜೊತೆಗೆ ಇದೀಗ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಾಗಿರುವುದರಿಂದ ನಿನ್ನೆ ಶಿವಮೊಗ್ಗ ಸೇರಿದಂತೆ ೮ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವೀಡಿಯೋ ಕಾನ್ಪರೇನ್ಸ್ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿರುವುದಾಗಿ ಹೇಳಿದ್ರು. ಇನ್ನೂ
ಈ ಭಾಗದ ಜನರ ಆರ್ಥಿಕತೆಯ ಮೂಲ ಸೌಕರ್ಯಗಳನ್ನು ಉನ್ನತೀಕರಿಸಲು ನಾನು ಎಲ್ಲಾ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ತೃಪ್ತಿ ನನಗಿದೆ, ಎಂದು ಬಿ.ಎಸ್.ವೈ ಹೇಳಿದ್ದಾರೆ. ಜೊತೆಗೆ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆ ನಾನು ಕೈ ಜೋಡಿಸಿ ಸವಾಲನ್ನು ಎದುರಿಸಲು ಬೆಂಬಲಿಸಿದ ನನ್ನ ಜನತೆಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಬಿ.ಎಸ್.ವೈ ತಿಳಿಸಿದ್ದಾರೆ. ಇನ್ನೂ ಶಿವಮೊಗ್ಗ ಅಭಿವೃದ್ಧಿ ಪರ್ವ ಹೀಗೆ ಮುಂದುವರಿಯಲಿದೆ ಎಂಬ ವಿಶ್ವಾಸವು ನನಗಿದೆ ಎಂದಿದ್ದಾರೆ.

error: Content is protected !!