ಹುಬ್ಬಳ್ಳಿ: ಬುಧವಾರದಿಂದ ಬೆಳಗಾವಿಗೆ ತೆರಳಿ ಪ್ರಚಾರ ಪ್ರಾರಂಭಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷದ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈಗಾಗಲೇ ಬೆಳಗಾವಿ ನಾಯಕರ ಜೊತೆಗೆ ಮಾತನಾಡಲಾಗಿದ್ದು ಅಧಿಕೃತವಾಗಿ ಬುಧವಾರದಿಂದ ಬೆಳಗಾವಿಗೆ ತೆರಳಿ ಪ್ರಚಾರ ಪ್ರಾರಂಭಿಸುತ್ತೇನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕು ಅನ್ನೋದು ಎಲ್ಲರ ಇಚ್ಛೇ ಆಗಿದೆ
ಬೆಳಗಾವಿಯ ಎಲ್ಲಾ ನಾಯಕರ ಜೊತೆ ಮಾತಾಡಿದ್ದೇನೆ.
ಎಲ್ಲರೂ ಒಟ್ಟಾಗಿ ಚುನಾವಣೆ ಮಾಡೋಣ ಅಂದಿದ್ದಾರೆ.
ಹೋಳಿ ಹಬ್ಬದ ಕಾರಣ ಈಗ ಹೋಗಲ್ಲ. ಬುಧವಾರದಿಂದ ಬೆಳಗಾವಿಗೆ ತೆರಳಿ ಪ್ರಚಾರ ಪ್ರಾರಂಭಿಸುತ್ತೇನೆ. ನಾನು ಬೆಳಗಾವಿ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ
ಕಾಂಗ್ರೆಸ್ ಅಭ್ಯರ್ಥಿ ಯುವಕ ಅನ್ನೋ ಕಾರಣಕ್ಕೆ ನೆಗ್ಲೆಕ್ಟ್ ಮಾಡಲ್ಲಾ ಈ ಚುನಾವಣೆಯಲ್ಲಿ ಜಾತಿ ಫ್ಯಾಕ್ಟರ್ ಕೆಲಸ ಮಾಡಲ್ಲಾ. ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾನು ಗೆದ್ದು ಬರುತ್ತೇನೆ. ಈ ಚುನಾವಣೆಯನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಹುಬ್ಬಳ್ಳಿ ನನ್ನ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ
ಬೆಳಗಾವಿಯನ್ನು ಕರ್ಮಭೂಮಿಯಾಗಿ ತೆಗೆದುಕೊಳ್ಳುತ್ತೇನೆ ಎಂದ್ರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ. ಸಂಸದೆ ಮಂಗಳಾ ಅಂಗಡಿ ಸೇರಿದಂತೆ ಕುಟುಂಬಸ್ಥರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಮಂಗಳಾ ಅಂಗಡಿಯವರ ಕುಟುಂಬ ನನ್ನ ಪರ ಪ್ರಚಾರ ಮಾಡುತ್ತಾರೆ. ಇನ್ನು ರಮೇಶ್ ಜಾರಕಿಹೋಳಿಯವರು ನಿರಂತರ ಸಂಪರ್ಕದಲ್ಲಿದ್ದು ನಮಗೆ ಬೆಂಬಲ ಕೊಡುತ್ತಾರೆ.
ಜನಾರ್ಧನ ರೆಡ್ಡಿ ಈ ಹಿಂದೆ ಬಿಜೆಪಿ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಜೆಪಿಗೆ ಅಸ್ತಿತ್ವವೇ ಇಲ್ಲದಾಗ ಸಂಘಟನೆ ಮಾಡಿದ್ದಾರೆ. ಜನಾರ್ಧನ ರೆಡ್ಡಿಯವರ ಹಾಗೆ ಸಾಕಷ್ಟು ಜನರು ಬಿಜೆಪಿಗೆ ಬರ್ತಾರೆ ಎಂದರು.