ಬೇಸಿಗೆಯ ಸಮಯದಲ್ಲಿ ಆಹಾರಕ್ಕಿಂತ ಹೆಚ್ಚಾಗಿ ಬಾಯಾರಿಕೆಯಾಗುತ್ತದೆ. ಒಂದು ಲೋಟ ಹಣ್ಣಿನ ರಸವು ಮನಸ್ಸು ಮತ್ತು ದೇಹವನ್ನು ರಿಫ್ರೆಶ್ಗೊಳಿಸುತ್ತದೆ. ಬೇಸಿಗೆಯ ಬೇಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡುವುದು ಅತಿ ಮುಖ್ಯವಾದುದು. ಲೇಖನದಲ್ಲಿ ತಿಳಿಸಿರುವ ಹಣ್ಣಿನ ರಸವು ಕೇವಲ ನಿಮ್ಮ ಬಾಯಾರಿಕೆಯನ್ನು ಮಾತ್ರ ತಣಿಸುವುದಿಲ್ಲ, ಬದಲಾಗಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ತೂಕ ಇಳಿಸಿಕೊಳ್ಳಲು ಸೂಕ್ತವಾದ ಸಮಯವೆಂದೇ ಹೇಳಬಹುದು. ಹೆಚ್ಚಿನ ಕ್ಯಾಲೋರಿಗಳಿರುವ ಆಹಾರವನ್ನು ಸೇವನೆ ಮಾಡುವ ಬದಲು, ತಾಜಾ ಹಣ್ಣುಗಳು ತಿನ್ನುವುದು ಒಳ್ಳೆಯದು. ಹಣ್ಣಿನ ಜ್ಯೂಸ್ ಅನ್ನು ಸಕ್ಕರೆ ರಹಿತವಾಗಿ ಸೇವನೆ ಮಾಡಿದಾಗ ಚಯಾಪಚಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ಸೌತೆಕಾಯಿ ಕೇವಲ ಆರೋಗ್ಯ, ತೂಕ ಇಳಿಕೆಗೆ ಮಾತ್ರವಲ್ಲ ಚರ್ಮಕ್ಕೂ ಬಹಳ ಒಳ್ಳೆಯದು. ಸೌತೆಕಾಯಿಯಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಪುದೀನ ಎಲೆಗಳೊಂದಿಗೆ ಒಂದು ಲೋಟ ಸೌತೆಕಾಯಿಯ ರಸವು ನಿಮ್ಮ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಸೌತೆಕಾಯಿಯ ಜ್ಯೂಸ್ ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ತೂಕ ಇಳಿಕೆಯ ಪಾನೀಯವಾಗಿ ಸೇವನೆ ಮಾಡಬಹುದು. ಈ ಜ್ಯೂಸ್ ಹಲವಾರು ಪೋಷಕಾಂಶಗಳಿಂದ ತುಂಬಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಹಾಗಲಕಾಯಿ ರಸವು ಬಾಯಿಗೆ ಕಹಿ ಕಹಿಯಾಗಿದ್ದರು ಆರೋಗ್ಯಕ್ಕೆ ಬಹಳ ಸಿಹಿಯಾಗಿದೆ. ನೀವು ಮಧುಮೇಹದಿಂದ ಬಳಲುತ್ತಿದ್ದರೆ ಅಥವಾ ತೂಕ ನಷ್ಟಕ್ಕೆ ಆಯೋಜಿಸಿದ್ದರೆ ಹಾಗಲಕಾಯಿ ಜ್ಯೂಸ್ ಬೆಸ್ಟ್ ಎಂದೇ ಹೇಳಬಹುದು. ಏಕೆಂದರೆ ಇದರಲ್ಲಿ ಕಬ್ಬಿಣ, ಮೆಗ್ನೀಶಿಯಮ್, ವಿಟಮಿನ್ ಸಿ, ಪೊಟ್ಯಾಶಿಯಮ್ನಿಂದ ತುಂಬಿದೆ. ನಿಮ್ಮ ರಕ್ತವನ್ನು ಶುದ್ಧೀಕರಿಸಲು ಹಾಗಲಕಾಯಿ ಸಹಾಯ ಮಾಡುತ್ತದೆ.
ಕಿತ್ತಳೆ ಜ್ಯೂಸ್ ಯಥೇಚ್ಚವಾಗಿ ವಿಟಮಿನ್ ಸಿ, ಎ ಮತ್ತು ಕ್ಯಾಲ್ಸಿಯಂ ಹೊಂದಿದೆ. ಸಾಮಾನ್ಯವಾಗಿ ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ನಿಮ್ಮ ಡಯಟ್ನಲ್ಲಿ ಕಿತ್ತಳೆಯನ್ನು ಸೇರಿಸುವುದರಿಂದ ದೇಹವು ಕಾಲಜನ್ ಅನ್ನು ತಯಾರಿಸಲು ಉತ್ತೇಜಿಸುತ್ತದೆ. ಕಿತ್ತಳೆ ಆರೋಗ್ಯ, ಚರ್ಮ ಮತ್ತು ತೂಕ ನಷ್ಟಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಚರ್ಮಕ್ಕೆ ವಿಶೇಷವಾದ ಹೊಳಪನ್ನು ಪಡೆಯಲು ಪ್ರತಿನಿತ್ಯ ಕಿತ್ತಳೆ ಹಣ್ಣನ್ನು ಸೇವನೆ ಮಾಡುವುದು ಒಳ್ಳೆಯದು. ಅಲ್ಲದೆ, ಕಿತ್ತಳೆಯಲ್ಲಿರುವ ವಿಟಮಿನ್ ಸಿ ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕವನ್ನು ತ್ವರಿತವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ ದಾಳಿಂಬೆ ಹಣ್ಣು ಕಬ್ಬಿಣ, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ನಿಂದ ತುಂಬಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಅಪಾಯಕಾರಿ ಹೃದ್ರೋಗವನ್ನು ತಡೆಯಲು ದಾಳಿಂಬೆ ಹಣ್ಣು ಸಾಕಷ್ಟು ಪರಿಣಾಮಕಾರಿಯಾಗಿದೆ. ಬೇಸಿಗೆಯಲ್ಲಿ ರಿಫ್ರೆಶ್ ಆಗಲು ದಾಳಿಂಬೆ ಹಣ್ಣಿನ ಜ್ಯೂಸ್ ಫರ್ಪೆಕ್ಟ್ ಎಂದೇ ಹೇಳಬಹುದು. ಈ ಜ್ಯೂಸ್ ನಿಮ್ಮ ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುವುದರ ಜೊತೆ ಜೊತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ.