ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ನಗರಕ್ಕೆ ಎದುರಾಯ್ತಾ ಜಲಕ್ಷಾಮ

ಒಂದು ವಾರದಲ್ಲಿ ಮಳೆ ಬರದೇ ಇದ್ರೆ ಬೆಳಗಾವಿಯಲ್ಲಿ ಕುಡಿಯುವ ನೀರು ಸಂಪೂರ್ಣ ಖಾಲಿ‌ಯಾಗಲಿದೆ. ಹೀಗಾಗಿ ನೀರನ್ನು ಮಿತವಾಗಿ ಬಳಸಿ ಎಂದು ಈಗಾಗಲೇ ಸಾರ್ವಜನಿಕರಿಗೆ ಜಲಮಂಡಳಿ ಎಚ್ಚರಿಕೆ ಕೊಟ್ಟಿದೆ. ಸದ್ಯ ರಕ್ಕಸಕೊಪ್ಪ ಡ್ಯಾಂನ ಡೆಡ್ ಸ್ಟೋರೇಜ್ ನೀರು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ.

ವರ್ಷ ಇಡೀ ಬೆಳಗಾವಿಗೆ ನೀರು ಪೂರೈಕೆ ಮಾಡೋ ರಕ್ಕಸಕೊಪ್ಪ ಜಲಾಶಯದ ಡೆಡ್ ಸ್ಟೋರೆಜ್ ನೀರನ್ನ ಪಂಪ್ ಸೆಟ್ ಮೂಲಕ ಹೊರಕ್ಕೆ ತೆಗೆದು ಪೂರೈಸಲಾಗುತ್ತಿದೆ. ಈ ವರೆಗೂ ಪಂಪ್ ಹೌಸ್ ನಿಂದ ಸುಲಭವಾಗಿ ಸಪ್ಲೈ ಆಗ್ತಿದ್ದ ನೀರು ಈಗ ಕಷ್ಟ ಆಗುತ್ತಿದೆ. ಸದ್ಯ ನಗರದಲ್ಲಿ 10ರಿಂದ 15 ದಿನಕ್ಕೆ ಒಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು ಮುಂಗಾರು ಮಳೆ ಕೈಕೊಟ್ಟಿದ್ದು ಬಹುತೇಕ ಜಲಾಶಯ ಬರಿದಾಗಿದೆ.

error: Content is protected !!