ಬೆಳಗಾವಿ: ತಾಂತ್ರಿಕ ದೋಷದಿಂದಾಗಿ ಜಿಲ್ಲೆಯಲ್ಲಿ ಬರೋಬ್ಬರಿ ಒಂಬತ್ತು ಕಡೆ ಮತದಾನ ಸ್ಥಗಿತವಾಗಿದೆ. ಕಿತ್ತೂರು ಪಟ್ಟಣ, ದೇವಗಾಂವ, ಮೂಡಲಗಿ ಪಟ್ಟಣ, ಅರಬಾವಿ, ಕಾದ್ರೋಳ್ಳಿ, ನೇಸರಗಿ, ಉಳ್ಳಿಗೇರಿ, ಅಥಣಿ, ಗಳತಗಾ ಗ್ರಾಮದಲ್ಲಿ ಮತದಾನ ಸ್ಥಗಿತವಾಗಿದೆ.
ಕಿತ್ತೂರು ಪಟ್ಟಣದಲ್ಲಿ ಎರಡೂವರೆ ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ಇನ್ನೂಳಿದ ಮತಗಟ್ಟೆಗಳಲ್ಲಿ ಒಂದು ಗಂಟೆ, ಅರ್ಧ ಗಂಟೆಯಿಂದ ಸ್ಥಗಿತಗೊಂಡಿದೆ. ಮತಗಟ್ಟೆ ಮುಂಭಾಗದಲ್ಲಿ ಕಾದು ಕಾದು ಮತದಾರರು ಸುಸ್ತಾಗಿದ್ದಾರೆ.