ಕೂಗು ನಿಮ್ಮದು ಧ್ವನಿ ನಮ್ಮದು

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಟಿ ಅಮೂಲ್ಯ ಜಗದೀಶ್‌ ದಂಪತಿ !

ಬೆಂಗಳೂರು: ಕರ್ನಾಟಕ ಚುನಾವಣೆ 2023: ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆ ಬೆಳ್ಳಗೆ 7ರಿಂದಲೇ ಆರಂಭಗೊಂಡಿದೆ. ಈ ಹಿನ್ನಲೆ ಪ್ರತಿಯೊಬ್ಬ ನಾಗರಿಕನು ಮತದಾನ ಚಲಾಯಿಸುವುದು ಮುಖ್ಯವಾಗಿದೆ. ಹೀಗಾಗಿ ಸ್ಯಾಂಡಲ್ವುಡ್ ಗಣ್ಯರು , ಜನಸಾಮಾನ್ಯರು,ರಾಜಕೀಯ ವ್ಯಕ್ತಿಗಳು ಒಬ್ಬೊರಾಗಿ ಮತ ಚಲಾಯಿಸಿ ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ನಟಿ ಅಮೂಲ್ಯ ಜಗದೀಶ್‌ ದಂಪತಿಗಳು ಬೆಂಗಳೂರಿನ ಆರ್​ಆರ್​​ ನಗರದಲ್ಲಿ ಮತ ಹಾಕಿ, ಉಳಿದವರಿಗೂ ಮತ ಹಾಕುವಂತೆ ಸೂಚನೆ ನೀಡಿದ್ದಾರೆ. ರಾಜ್ಯದೆಲ್ಲೆಡೆ ಮತದಾನ ರಂಗು ಕಲರವ ಜೋರಾಗಿದೆ.

error: Content is protected !!