ಕೂಗು ನಿಮ್ಮದು ಧ್ವನಿ ನಮ್ಮದು

Vivo V25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌

ವಿವೋ ಸಂಸ್ಥೆಯು ವಿವೋ ವಿ25 ಪ್ರೋ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ತಿಳಿ ನೀಲಿ ಬಣ್ಣದಲ್ಲಿರುವ ಫೋನು ಬಿಸಿಲಿನಲ್ಲಿ ಕಡು ನೀಲಿ ಬಣ್ಣಕ್ಕೆ ಬದಲಾಗುತ್ತದೆ. 6.56 ಇಂಚಿನ 3ಡಿ ಡಿಸ್‌ಪ್ಲೇ ಇದರಲ್ಲಿದೆ. ತ್ರಿಬಲ್‌ ರೇರ್‌ ಕ್ಯಾಮರಾಗಳಿದ್ದು, 64ಎಂಪಿಯ ಪ್ರೈಮರಿ ಕ್ಯಾಮರಾ ಮತ್ತು 32ಎಂಪಿಯ ಸೆಲ್ಫಿ ಕ್ಯಾಮರಾವಿದೆ.

4830ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 66ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಇದೆ. 8GB RAM ಜತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನಿನ ಬೆಲೆ 35,999 ರೂ. ಇದ್ದರೆ 12GB RAM ಜತೆ 256ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನಿನ ಬೆಲೆ 39,999 ರೂ. RAM ಅನ್ನು ಹೆಚ್ಚುವರಿ 8ಜಿಬಿ ವಿಸ್ತರಿಸಿಕೊಳ್ಳುವ ಆಯ್ಕೆಯೂ ಇದರಲ್ಲಿದೆ. ಈ ಫೋನು. ಆಗಸ್ಟ್ 24ರಿಂದ ಮಾರುಕಟ್ಟೆಯಲ್ಲಿ ಲಭ್ಯ.

error: Content is protected !!