ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಗ್ರಾಮಗಳಿಗೆ ಇಂದು ಸಹ ಪ್ರಿಯಾಂಕಾ ಜಾರಕಿಹೊಳಿ ಭೇಟಿ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡಿ-ಖಾನಾಪುರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿದರು.

ನಂತರ ಹಿರಣ್ಯಕೇಶಿ ನದಿಯಿಂದಾದ ಹಾನಿಯನ್ನು ವೀಕ್ಷಿಸಿದ ಅವರು. ಯಮಕನಮರಡಿ ಮತಕ್ಷೇತ್ರದ ಚಿಕ್ಕಾಲಗುಡ್ಡ, ಕುರಣಿ, ಕೋಚರಿ, ಹೆಬ್ಬಾಳ, ಅರ್ಜನವಾಡ ಸೇರಿ ವಿವಿಧ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರಿಗೆ ಆಗಿರುವ ಸಮಸ್ಯೆಯನ್ನು ಅವಲೋಕಿಸಿದರು. ಚಿಕ್ಕಾಲಗುಡ್ಡ ಗ್ರಾಮದ ಗಂಜಿ ಕೇಂದ್ರಕ್ಕೆ ತೆರಳಿ, ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಿದರು. ನೆರೆ ಸಂತ್ರಸ್ತರಿಗೆ ಆಗಿರುವ ಹಾನಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬಡವರಿಗೆ ಪರಿಹಾರ ದೊರೆಕಿಸಿ ಕೊಡಬೇಕೆಂದು ಪ್ರತಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ ಅಧಿಕಾರಿಗಳಿಗೆ ಪ್ರಿಯಾಂಕಾ ಜಾರಕಿಹೊಳಿ ಇದೇ ವೇಳೆ ಮನವಿ ಮಾಡಿಕೊಂಡರು.

error: Content is protected !!