ಬೆಳಗಾವಿ: ಕೋವಿಡನಿಂದ ಮೃತಪಟ್ಟ ಬಡ ಕುಟುಂಬಗಳ ಮನೆಗೆ ಇಂದು ಮುನವಳ್ಳಿ ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡರ ಬೇಟಿ ನೀಡಿ ಸಾಂತ್ವನ ಹೇಳಿದರು. ಯರಗಟ್ಟಿ ತಾಲೂಕಿನ ಗ್ರಾಮಗಳಾದ ಗೋರಗುದ್ದಿ, ಕಡಬಿ ಗ್ರಾಮಗಳಿಗೆ ಬೇಟಿ ನೀಡಿದ ಅವರು, ಗ್ರಾಮದ
ತುಕಾರಾಮ ಕಾಶಿ, ಮುತ್ತೆಪ್ಪ. ಯಲಪ್ಪ. ಮಾಲಕನ್ನವರ ಅವರ ಕುಟುಂಬಕ್ಕೆ ಬೇಟಿ ನೀಡಿ ಸಾಂತ್ವನ ಹೇಳಿದರು. ಇನ್ನು ಆ ಬಡ ಕುಟುಂಬಕ್ಕೆ ಚಿಕ್ಕ ಧನ ಸಹಾಯ ಮಾಡಿದ ಪಂಚನಗೌಡ ದ್ಯಾಮನಗೌಡರ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಕಾರ ನೀಡುವ ಭರವಸೆಯನ್ನು ಸಹ ಕುಟುಂಬಕ್ಕೆ ನೀಡಿದರು.
ಇನ್ನು ಪಂಚನಗೌಡ ದ್ಯಾಮನಗೌಡರ ಕೋವಿಡ್ ಸಂಕಷ್ಟ ಸಮಯದಲ್ಲಿ ಸವದತ್ತಿ ತಾಲೂಕಿನ ಹಲವು ಗ್ರಾಮಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಿ. ಬಡ ಕುಟುಂಬಗಳಿಗೆ ಸಹಾಯ ಮಾಡಿ ಧೈರ್ಯ ತುಂಬವ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯ
ಸಹದೇವ ಜಗಮಯನ್ನವರ, ಕಲ್ಲಪ್ಪ ನಾಲವಡೆ
ಪರಶುರಾಮ ಗಂಟಿ ಸೇರಿದಂತೆ ಅನೇಕರು ಇದ್ದರು.