ಹುಬ್ಬಳ್ಳಿ: ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಂಠಕವಾಗಿದ್ದೆ ಆರೋಪಿಗಳ ಹೇಳಿಕೆ. ಜಿಲ್ಲಾ ಪಂಚಾಯತ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹೇಳಿಕೆ ಸಧ್ಯ ವಿನಯ್ ಕುಲಕರ್ಣಿಗೆ ಮುಳುವಾಗಿದೆ. ಇನ್ನು ಬಂಧಿತ ಆರೋಪಿಗಳು ಸಿಬಿಐ ವಿಚಾರಣೆ ವೇಳೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರವನ್ನು ಎಳೆ ಎಳೆಯಾಗಿ ಕಕ್ಕಿದ್ದಾರೆ.
ಅಂದು ಸಚಿವರಾಗಿದ್ದ ವಿನಯ್ ಕುಲಕರ್ಣಿ, ಬೆಂಗಳೂರಿನ ಮೌರ್ಯ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡಿದ್ದ. ಮೌರ್ಯ ಹೊಟೇಲ್ ನ ರೂಮ್ ನಂಬರ್ 555 ನ್ನು 8 ಜೂನ್ 2016 ರಿಂದ 20 ಜೂನ್ 2016 ರ ತನಕ ಬುಕ್ ಮಾಡಲಾಗಿತ್ತು. ವಿನಯ್ ಕುಲಕರ್ಣಿ, ತನ್ನ ಶಿಷ್ಯಂದಿರಿಗಾಗಿ ರೂಮ್ ಬುಕ್ ಮಾಡಿ ಬಿಟ್ಟಿದ್ದ. ಇನ್ನು ಯೋಗಿಶ್ ಗೌಡ ಕೊಲೆಯಾದ ನಂತರ ಬಸವರಾಜ್ ಮುತ್ತಗಿ ಮತ್ತು ಗ್ಯಾಂಗ್ ವಿನಯ್ ಕುಲಕರ್ಣಿ ಯನ್ನು ಭೇಟಿಯಾಗಿದೆ. 16 ಜೂನ್ 2016 ರಂದು ಬಸವರಾಜ್ ಮುತ್ತಗಿ ಮತ್ತು ಗ್ಯಾಂಗ್ ನಿಂದ ಬೆಂಗಳೂರಿನ ಸದಾಶಿವ ನಗರದಲ್ಲಿ ಮಧ್ಯಾಹ್ನ 1:30ಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ.
ಇನ್ನು ಆರೋಪಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಸಿಬಿಐ ಆರೋಪಿಗಳಿಗೆ ಫುಲ್ ಡ್ರಿಲ್ ಮಾಡಿತ್ತು. ಹೀಗಾಗಿ ಆರೋಪಿಗಳ ಹೇಳಿಕೆಯಲ್ಲಿ ಈ ಎಲ್ಲ ಅಂಶಗಳು ಈಗ ಬಹಿರಂಗವಾಗಿವೆ. ಸಿಬಿಐ ಎದುರು ವಿನಯ್ ಕುಲಕರ್ಣಿ ಪಾತ್ರದ ಬಗ್ಗೆ ಆರೋಪಿಗಳು ಏಳೆ ಏಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನೊಂದು ಆಘಾತಕಾರಿ ವಿಷಯ ಏನಂದ್ರೆ, ಇಷ್ಟಾದ ಬಳಿಕ ವಿನಯ್ ಕುಲಕರ್ಣಿ, ಎ1 ದಿಂದ ಹಿಡಿದು ಎ6 ನ ವರೆಗೂ ಪೊಲೀಸರ ಮುಂದೆ ಸರೆಂಡರ್ ಮಾಡಿಸಲು ವ್ಯವಸ್ಥೆ ಮಾಡಿದ್ದ. ಕೊಲೆಯಲ್ಲಿ ಭಾಗಿಯಾಗಿದ್ದ ಎ7 ದಿಂದ ಎ14 ರ ಬದಲಾಗಿ, ಎ1 ದಿಂದ ಎ6 ರ ವರೆಗೆ ಸರಂಡರ್ ಗೆ ವ್ಯವಸ್ಥೆ ಮಾಡಲಾಗಿತ್ತು.
ಅದರಂತೆ 17 ಜೂನ್ ರಂದು ಎ1 ದಿಂದ ಎ5 ರ ವರೆಗಿನ ಅರೋಪಿಗಳು ಸ್ಥಳೀಯ ಪೊಲೀಸರ ಮುಂದೆ ಸರಂಡರ್ ಆದ್ರು. ನಂತರ ಎ 6, 20 ಜೂನ್ 2016 ರಂದು ಸ್ಥಳೀಯ ಪೊಲೀಸರ ಮುಂದೆ ಸರಂಡರ್ ಆಗಿದ್ದ. ಇದೆಲ್ಲದಕ್ಕೆ ಪುಷ್ಟಿ ನೀಡುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ಆರೋಪಿಗಳ ನಡುವಿನ ಸಿಡಿಆರ್ ಲಭ್ಯವಾಗಿದ್ದು, ಇದೇ ಕಾರಣಕ್ಕಾಗಿ ಸಿಬಿಐ ಅಧಿಕಾರಿಗಳು ಮೂರು ದಿನ ತಮ್ಮ ಕಸ್ಟಡಿಗೆ ಪಡೆದಿದ್ದು, ವಿನಯ್ ಕುಲಕರ್ಣಿಗೆ ಫುಲ್ ಡ್ರಿಲ್ ಮಾಡುತ್ತಿದ್ದಾರೆ.