ಕೂಗು ನಿಮ್ಮದು ಧ್ವನಿ ನಮ್ಮದು

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜಾಮೀನು, ಆದ್ರು ಇಲ್ಲ ಬಿಡುಗಡೆ ಭಾಗ್ಯ

ನವದೆಹಲಿ: BJP ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ CBI ನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಇವತ್ತು ಷರತ್ತು ಬದ್ಧ ಜಾಮೀನು ನೀಡಿದೆ. ಇವತ್ತು ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾ.ಯು.ಯು ಲಲಿತ್ ನೇತೃತ್ವದ ದ್ವಿ ಸದಸ್ಯ ಪೀಠ ಜಾಮೀನು ಕೊಟ್ಟಿದೆ.

ವಿಚಾರಣೆಯ ವೇಳೆಯಲ್ಲಿ ಜಾಮೀನು ಕೋಡದಂತೆ ಪ್ರಕರಣ ತನಿಖೆ ನಡೆಸುತ್ತಿರುವ CBI ಆಕ್ಷೇಪ ವ್ಯಕ್ತಪಡಿಸಿತ್ತು. ವಿನಯ್ ಕುಲಕರ್ಣಿ ಇಡಿ ಪ್ರಕರಣದ ಪ್ರಮುಖ ಆರೋಪಿ, ಪ್ರಕರಣದ ದಿಕ್ಕು ತಪ್ಪಿಸುವಂತ ಪ್ರಯತ್ನ ಮಾಡಿದ್ರು. ಜೊತೆಗೆ ನಕಲಿ ಆರೋಪಿಗಳನ್ನು ಸೃಷ್ಟಿಸಿ ಭೂ ವೈಷಮ್ಯಕ್ಕಾಗಿ ಹತ್ಯೆ ನಡೆದಿದೆ ಎನ್ನುವಂತೆ ಬಿಂಬಿಸಲಾಗಿತ್ತು. ಕೊಲೆ ಆರೋಪಿಗಳಿಗೆ ವಿನಯ್ ಕುಲಕರ್ಣಿ ಹೋಟೆಲ್ ಅಲ್ಲಿ ಇರಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿರುವುದು ತನಿಖೆಯಲ್ಲಿ ಗೋತ್ತಾಗಿದೆ.

ತನಿಖೆಯ ಹಂತದಲ್ಲಿ ಜಾಮೀನು ಕೋಟ್ಟಿದ್ದಲ್ಲಿ ವಿನಯ್ ಕುಲಕರ್ಣಿ ಸಾಕ್ಷ್ಯವನ್ನು ನಾಶ ಮಾಡಬಹುದು, ವಿಚಾರಣೆಗೆ ಹಾಜರಾಗದೆ ಇರಬಹುದು ಎಂದು CBI ಪರವಾಗಿ ವಕೀಲ A.S.G ಎಸ್.ವಿ ರಾಜು ವಾದ ಮಂಡಿಸಿದ್ರು. ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಕೋಟ್ಟಿದೆ.

ಧಾರವಾಡಕ್ಕೆ ಹೋಗದಿರುವಂತೆ ಸೂಚನೆ ನೀಡಿದ್ದು, ವಿಚಾರಣೆಗೆ ಅಧಿಕಾರಿಗಳು ಕರೆದಾಗ ಬರಬೇಕು ಮತ್ತು ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇನ್ನೂ ಜಾಮೀನು ಸಿಕ್ರು ವಿನಯ್ ಕುಲಕರ್ಣಿಗೆ ಬಿಡುಗಡೆ ಅನುಮಾನ ಎನ್ನಲಾಗಿದ್ದು, ಮುಖ್ಯ ಪ್ರಕರಣದಲ್ಲಿ ಮಾತ್ರವೇ ಇವತ್ತು ಜಾಮೀನು ಸಿಕ್ಕಿದ್ದು, ವಿನಯ್ ಕುಲಕರ್ಣಿಯ ವಿರುದ್ಧ ಸಾಕ್ಷ್ಯವನ್ನು ನಾಶ ಮಾಡಿದ ಆರೋಪದ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಈ ಕೇಸ್ ಇತ್ಯರ್ಥ ಆಗುವ ವರೆಗೂ ವಿನಯ್ ಕುಲಕರ್ಣಿ ಜೈಲಿನಿಂದ ಹೊರಗೆ ಬರುವುದು ಅನುಮಾನ ಎನ್ನಲಾಗಿದೆ.

error: Content is protected !!