ಕೂಗು ನಿಮ್ಮದು ಧ್ವನಿ ನಮ್ಮದು

ಮಾಜಿ ಶಾಸಕ ಕಾಶಪ್ಪನವರ ‌ಮನೆಯಲ್ಲಿ ಹೈಡ್ರಾಮಾ..!ಪೊಲೀಸರ ಜೊತೆ ವಾಗ್ವಾದ

ಬಾಗಲಕೋಟೆ: ಹುನಗುಂದ ‌ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ‌ ಮನೆಯಲ್ಲಿ ಗಲಾಟೆ ನಡೆದಿದೆ ಎಂದು ಅಕ್ಕಪಕ್ಕದ ‌ಮನೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಕಾರಣ ಸ್ಥಳಕ್ಕೆ ಇಳಕಲ್ ನಗರ ಠಾಣೆ ಪೊಲೀಸರು, ಇಳಕಲ್ ಪಿಎಸ್ಐ ಎಸ್.ಬಿ ಪಾಟಿಲ್, ಹುನಗುಂದ ಸಿಪಿಐ ಹೊಸಕೇರಪ್ಪ ಕೋಳೂರ ರವರು ಕಾಶಪ್ಪನವರ ಮನೆಗೆ ವಾರೆಂಟ್ ಹಿಡಿದು ಬಂದಿದ್ದರು. ಇದರಿಂದ ಕುಪಿತಗೊಂಡ ಕಾಶಪ್ಪನವರು ನಮ್ಮ ಮನೆಯಲ್ಲಿ ಗಲಾಟೆ ಎಲ್ಲಿ ಆಗಿದೆ ಸಾಬೀತು ಮಾಡಿ ಎಂದು ಸಿಪಿಐ ಮತ್ತು ಪಿ.ಎ.ಸ್ಐ. ಜೊತೆ ವಾಗ್ವಾದ ನಡೆಸಿದರು.

ಎಸ್ ಪಿ ಕರೆಸಿ, ಎಲ್ಲಿದೆ ಎಸ್ ಪಿ ಆದೇಶ..? ಮನೆಗೆ ಹೇಗೆ ಬಂದ್ರಿ ಎಂದು ಪೊಲೀಸರ ‌ಮೇಲೆ ಕಾಶಪ್ಪನವರ ಗರಂ ಆದರು. ಆದರೆ ಕಾಶಪ್ಪನವರ ಮನೆಗೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಹಳೆ‌ ಕೇಸ್ ಬೇಲೆಬಲ್ ವಾರೆಂಟ್ ಹಿಡಿದು ಪೊಲೀಸರು ಬಂದಿದ್ದರು. ನೀವು ವಾರೆಂಟ್ ಅಂತ ಬಂದಿಲ್ಲ, ನಮ್‌ ಮನೆಯಲ್ಲಿ ಗಲಾಟೆ ಅಂತ ಹೇಳಿದ್ದಾರೆ ಅದಕ್ಕೆ ಬಂದಿದಿರಿ, ನೀವು ಮನೆಗೆ ನುಗ್ಗಿ ಗಲಾಟೆ ಅಂತ ಹೇಳಿದ್ದಿರಿ ಗಲಾಟೆ ಎಲ್ಲಿ ಆಗಿದೆ ತೋರಿಸಿ, ಇದನ್ನ ನಾನು ತನಿಖೆಗೆ ಕೊಡುತ್ತೇನೆ ಎಂದು ಪೊಲೀಸರಿಗೆ ಆವಾಜ್ ಹಾಕಿದರು..!

ಅರೆಸ್ಟ್ ಮಾಡಿ ,ಅರೆಸ್ಟ್ ಮಾಡೋಕೆ ಬಂದಿರಿ ಮಾಡಿ. ನೀವು ಕೇಸ್ ಹಾಕ್ತಿನಿ ನೋಡ್ಕೊತಿನಿ ಅಂದಿದಿರಿ, ಅರೆಸ್ಟ್ ಮಾಡಿ, ಎಷ್ಟು ಕೇಸ್ ಮಾಡ್ತಿರಿ ಮಾಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದಲ್ಲದೆ ಪೊಲೀಸರು ನನ್ ಮನೆಗೆ ಆಕ್ರಮವಾಗಿ ವಿಥೌಟ್ ಸರ್ಚ್ ವಾರೆಂಟ್ ನುಗ್ಗಿದಾರೆ ಎಂದು ಕಾಶಪ್ಪನವರ ಆರೋಪಿಸಿದರು.

ನಂತರ ಬೆಂಬಲಿಗರನ್ನು ಕರೆದುಕೊಂಡು‌ ಮನೆಯಲ್ಲಿ ಕೂತ ಕಾಶಪ್ಪನವರು ಹುನಗುಂದ ಎಮ್ ಎಲ್ ಎ ದೊಡ್ಡನಗೌಡ ಕುಮ್ಮಕ್ಕಿನಿಂದ ನೀವು ಬಂದಿದಿರಿ, ಮನೆಗೆ ಬಂದು ದೌರ್ಜನ್ಯ ಮಾಡ್ತಿದಿರಿ ಎಂದು ಪೋಲಿಸರ ಮೇಲೆ ಆರೋಪಿಸಿದರು. ನಾವು ಯಾರೆ ಕರೆ ಮಾಡಿದರೂ ಬರುತ್ತೇವೆ ಎಂದು ಕಾಶಪ್ಪನವರಿಗೆ ಪೊಲೀಸರು ತಿಳಿಸಿದರು .

error: Content is protected !!