ಕೂಗು ನಿಮ್ಮದು ಧ್ವನಿ ನಮ್ಮದು

ತರಕಾರಿ ಬೆಲೆಯೇರಿಕೆ ಕೇವಲ ಗ್ರಾಹಕರಿಗಷ್ಟೇ ಅಲ್ಲ ವ್ಯಾಪಾರಿಗಳಿಗೂ ತಲೆಬಿಸಿ ಮಾಡಿದೆ

ಬೆಂಗಳೂರು: ತರಕಾರಿ, ಕಾಯಿಪಲ್ಯಗಳ ಬೆಲೆಯಲ್ಲಿ ವಿಪರೀತ ಹೆಚ್ಚಳವಾಗಿದ್ದು ಜನಸಾಮಾನ್ಯರ ಬಜೆಟ್ ಅಸ್ತವ್ಯಸ್ತಗೊಂಡಿದೆ. ಕೊಳ್ಳುವವರು ಬಿಡಿ, ತರಕಾರಿ ಮಾರುವವರು ಸಹ ಸರ್ಕಾರವನ್ನು ಮನಬಂದಂತೆ ತೆಗಳುತ್ತಿದ್ದಾರೆ. ನಗರದ ಹೊರವಲಯಲದ ಗ್ರಾಮವೊಂದರಿಂದ ಬೆಳಗಿನ ಜಾವ 3 ಗಂಟೆಗೆ ಕೆಆರ್ ಮಾರ್ಕೆಟ್ಗೆ ತರಕಾರಿ ಹೊತ್ತು ತಂದು ಸಗಟು ಬೆಲೆಯಲ್ಲಿ ಮಾರುವ ಈ ರೈತ, ಯಾವ ಸರ್ಕಾರ ಬಂದರೂ ರೈತರ ಮತ್ತು ಜನಸಾಮಾನ್ಯರ ಗೋಳು ತಪ್ಪಿದ್ದಲ್ಲ ಎಂದು ಹೇಳುತ್ತಾರೆ.

ರೈತನನ್ನು ದೇಶದ ಬೆನ್ನೆಲುಬು, ಅನ್ನದಾತ ಅಂತ ಹೇಳಿದ್ದಷ್ಟೇ ಬಂತು, ಅವನ ಸಂಕಷ್ಟ ಸರ್ಕಾರಗಳು ಅರ್ಥಮಾಡಿಕೊಳ್ಳಲಾರವು ಎಂದು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳು ಜಾರಿಗೊಳ್ಳಬೇಕಾದರೆ ಒಂದು ವರ್ಷ ಹಿಡಿಯುತ್ತೆ ಎಂದು ಅವರು ಹೇಳುತ್ತಾರೆ. ಕೆಂಪು ಅಂಗಿ ತೊಟ್ಟು ತರಕಾರಿ ಮಾರುತ್ತಿರುವ ಈ ವ್ಯಾಪಾರಿ, ಎರಡು ಮೂರು ಮೂಟೆಗಳಷ್ಟು ತರಕಾರಿ ಮಾರುತ್ತಿದ್ದವನು ಬೆಲೆಯೇರಿಕೆಯಿಂದಾಗಿ ಅರ್ಧ ಮೂಟೆ ಮಾರುವುದು ಕೂಡ ಕಷ್ಟವಾಗುತ್ತಿದೆ ಎನ್ನುತ್ತಾರೆ.

error: Content is protected !!