ಕರೋನಾ ವೈರಸ್ ಗಾಗಿ 2 ಡೋಸ್ ನೀಡಲಾಗುವ ನೆಸಲ್ ವ್ಯಾಕ್ಸಿನ್ ಪರೀಕ್ಷೆಯನ್ನು ಒಟ್ಟು 3100 ಜನರ ಮೇಲೆ ನಡೆಸಲಾಗಿದೆ. ಭಾರತದ ವಿವಿಧ 14 ಪ್ರದೇಶಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗಿದೆ. ಇದಲ್ಲದೆ ವೈವಿಧ್ಯಮಯ ಬೂಸ್ಟರ್ ಡೋಸ್‌ನ ಪರೀಕ್ಷೆಯನ್ನು ಸುಮಾರು 875 ಜನರ ಮೇಲೆ ನಡೆಸಲಾಗಿದೆ ಹಾಗೂ ಈ ಪರೀಕ್ಷೆಗಳನ್ನು ಭಾರತದಲ್ಲಿ ಒಂಬತ್ತು ವಿವಿಧ ಸ್ಥಳಗಳಲ್ಲಿ ನಡೆಸಲಾಗಿದೆ. ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿರುವ ಇಂದಿನ ಸಂದರ್ಭದಲ್ಲಿ ಭಾರತ ಕರೋನಾ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ.
ಮೂಗಿನ ಮೂಲಕ ನೀಡಲಾಗುವ ಕೊರೊನಾ ಲಸಿಕೆ ಪರೀಕ್ಷೆಯಲ್ಲಿ ಕೋವ್ಯಾಕ್ಸಿನ್ ಉತ್ಪಾದಕ ಕಂಪನಿಯಾಗಿರುವ ಭಾರತ್ ಬಯೋಟೆಕ್ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಈ ಲಸಿಕೆಯ ವೈಜ್ಞಾನಿಕ ಹೆಸರು BBV154 ಆಗಿದ್ದು, ಮೂಗಿನ ಮೂಲಕ ನೀಡಲಾಗುವ ಈ ಲಸಿಕೆಯು 2 ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದೆ. ಮೊದಲ ಪರೀಕ್ಷೆ 2 ಡೋಸ್ ಪ್ರಾಥಮಿಕ ಕರೋನಾ ಲಸಿಕೆ ಮತ್ತು ಎರಡನೆಯದು ಬೂಸ್ಟರ್ ಡೋಸ್‌ನೊಂದಿಗೆ ಪರೀಕ್ಷೆ ನಡೆಸಲಾಗಿದೆ, ಇದನ್ನು ಕೋವ್‌ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಅನ್ನು ಪಡೆದ ಜನರಿಗೆ ನೀಡಬಹುದಾಗಿದೆ. ಈ ಕುರಿತಾದ ಮಾನವ ಕ್ಲಿನಿಕಲ್ ಟ್ರಯಲ್ಸ್ ನ ಮೂರನೇ ಹಂತ ಪೂರ್ಣಗೊಂಡಿದ್ದು, ಅದರ ದತ್ತಾಂಶಗಳನ್ನೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಸಲ್ಲಿಸಲಾಗಿದೆ.