ಇನ್ನೂ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿಯವರು ಪ್ರಮಾಣ ವಚನವನ್ನು ಸ್ವೀಕರಿಸಿದ್ದು ಅತಿ ಶೀಘ್ರದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ. ಜೊತೆಗೆ ಈ ಹಿನ್ನಲೆ ಸಂಪುಟ ಸೇರಲು ಲಾಬಿ ಶುರುವಾಗಿದ್ದು ಹಲವು ಹಿರಿಯ ನಾಯಕರು ಈಗ ದೆಹಲಿಯಲ್ಲಿರುವ ವರಿಷ್ಠರ ಮನೆಯ ಕದ ತಟ್ಟಲು ಶುರು ಮಾಡಿದ್ದಾರಂತೆ.ನವದೆಹಲಿ: ಯಡಿಯೂರಪ್ಪನವರ ಸರ್ಕಾರದಲ್ಲಿ ಆಹಾರ ಖಾತೆ ಸಚಿವರಾದ ಹಿರಿಯ ನಾಯಕ ಉಮೇಶ್ ಕತ್ತಿ ಅವರು ಈಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗಿಂತಲೂ ಮುಂಚೆಯೇ ದೆಹಲಿ ತಲುಪಿದ್ದು ವರಿಷ್ಠರ ಭೇಟಿಗೆ ಸಮಯ ಕೇಳಿದ್ರು.
ಜೊತೆಗೆ ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿ ಆಗುತ್ತೇನೆ ಎಂಬ ನಂಬಿಕೆಯು ನನಗಿದೆ ಹಾಗೆಯೇ ನನ್ನನ್ನು ಬಿಟ್ಟು ಕ್ಯಾಬಿನೆಟ್ ಮಾಡಲ್ಲ ಎಂದುಕೊಂಡಿದ್ದೇನೆ. ಎಂದು ಹೇಳಿದ್ದಾರೆ. ಇನ್ನೂ ಈ ಹಿಂದೆ ೪ ಬಾರಿ ನಾನು ಮಂತ್ರಿಯಾಗಿದ್ದೇನೆ. ಹಾಗೆ ಮುಂದೆಯೂ ನಾನು ಸಿಎಂ ಆಗುತ್ತೇನೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ. ಇನ್ನೂ ಅಖಂಡ ಕರ್ನಾಟಕ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದಿದ್ದಾರೆ. ಜೊತೆಗೆ ನಾನು ಮಂತ್ರಿ ಆಗದಿದ್ದರೆ ಶಾಸಕನಾಗಿ ಮುಂದುವರೆಯುತ್ತೇನೆ. ಮತ್ತು ಅಮಿತ್ ಶಾ, ಜೆ.ಪಿ ನಡ್ಡಾ, ಬಿ.ಎಲ್ ಸಂತೋಷ್ ಭೇಟಿಗೆ ಸಮಯ ಕೇಳಿದ್ದೇನೆ. ಜೊತೆಗೆ ಅವಕಾಶ ಸಿಕ್ಕರೆ ಭೇಟಿ ಮಾಡುತ್ತೇನೆ ಎಂದ್ರು. ಇನ್ನೂ ಹಿರಿಯ ನಾಯಕರಿಗೆ ಕೊಕ್ ಎನ್ನುವುದು ಸುದ್ದಿಗಾರರ ವರದಿಯಷ್ಟೇ. ಜೊತೆಗೆ ಜಗದೀಶ್ ಶೆಟ್ಟರ್ ಹೇಳಿಕೆ ವೈಯಕ್ತಿಕ ಎಂದು ಕತ್ತಿ ಪ್ರತಿಕ್ರಿಯಿಸಿದ್ರು.