ಕೂಗು ನಿಮ್ಮದು ಧ್ವನಿ ನಮ್ಮದು

ಉಕ್ರೇನ್ ಜನವಸತಿ ಪ್ರದೇಶದ ಬಳಿ ಹೆಲಿಕಾಪ್ಟರ್ ಪತನ : 16 ಜನರ ದಾರುಣ ಸಾವು

ಕೀವ್ಸ್‌: ಉಕ್ರೇನ್ ರಾಜಧಾನಿ ಕೀವ್ ಬಳಿ ಹೆಲಿಕಾಪ್ಟರೊಂದು ಪತನಗೊಂಡಿದ್ದು, ಉಕ್ರೇನ್ ಅಂತರಿಕ ವ್ಯವಹಾರಗಳ ಸಚಿವ ಸೇರಿದಂತೆ 16 ಜನ ಪ್ರಾಣಬಿಟ್ಟಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌ನ ಕಿಂಡರ್‌ಗಾರ್ಟನ್ ಸಮೀಪ ಈ ಅನಾಹುತ ಸಂಭವಿಸಿದ್ದು, ಮೃತರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ. ಉಕ್ರೇನ್‌ನ ಆಂತರಿಕ ಉಪ ಸಚಿವ ಮತ್ತು ಇತರ ಅಧಿಕಾರಿಗಳು ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಅವಘಡದಲ್ಲಿ ಒಟ್ಟು 16 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಸೇರಿದಂತೆ ಆಂತರಿಕ ಸಚಿವಾಲಯದ ಹಲವಾರು ಉನ್ನತ ಅಧಿಕಾರಿಗಳು ಇದ್ದರು ಎಂದು ಎಂದು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ಮಾಹಿತಿ ನೀಡಿದ್ದಾರೆ. ಕೈವ್‌ನ ಪೂರ್ವ ಉಪನಗರದ ಬ್ರೋವರಿಯಲ್ಲಿ ಅಪಘಾತಕ್ಕೀಡಾದ ಈ ತುರ್ತು ಸೇವಾ ಹೆಲಿಕಾಪ್ಟರ್‌ನಲ್ಲಿ ಸಾವನ್ನಪ್ಪಿದವರಲ್ಲಿ ಒಂಬತ್ತು ಮಂದಿ ಇದ್ದರು. ಸತ್ತವರಲ್ಲಿ ಇಬ್ಬರು ಮಕ್ಕಳಿದ್ದರು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಇದಕ್ಕೂ ಮೊದಲು, ಕೈವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಒಲೆಕ್ಸಿ ಕುಲೆಬಾ ಬ್ರೋವರಿ ನಗರದಲ್ಲಿ, ಶಿಶುವಿಹಾರ ಮತ್ತು ವಸತಿ ಕಟ್ಟಡದ ಬಳಿ ಹೆಲಿಕಾಪ್ಟರ್ ಬಿದ್ದಿದೆ. ದುರಂತದ ವೇಳೆ ಮಕ್ಕಳು ಮತ್ತು ಉದ್ಯೋಗಿಗಳು ಶಿಶುವಿಹಾರದಲ್ಲಿದ್ದರು ಎಂದು ಮಾಹಿತಿ ನೀಡಿದ್ದಾರೆ. ಘಟನೆಯ ನಂತರ ವಿಡಿಯೋವೊಂದು ವೈರಲ್ ಆಗಿದ್ದು, ಕಿರುಚುವ ಸದ್ದು ಕೇಳಿಸುವುದರ ಜೊತೆ ಹೊಗೆ ಬರುವುದು ಕಾಣಿಸುತ್ತಿದೆ. ಶಿಶು ವಿಹಾರ ಹಾಗೂ ವಸತಿ ನಿವಾಸದ ಸಮೀಪದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.

error: Content is protected !!