ಬೆಂಗಳೂರು: ಕೊನೆಗೂ ಶಾಸಕ ಯು.ಟಿ. ಖಾದರ್ ಸ್ಪೀಕರ್ ಸ್ಥಾನವನ್ನು ಅಲಂಕರಿಸಲು ಸಮ್ಮತಿ ಸೂಚಿಸಿದ್ದಾರೆ. ತಡರಾತ್ರಿ ಯು.ಟಿ ಖಾದರ್ ಅವರನ್ನು ಕರೆಯಿಸಿಕೊಂಡು ಸ್ಪೀಕರ್ ಸ್ಥಾನವನ್ನು ಅಲಂಕರಿಸುವಂತೆ ಅವರ ಮನವೊಲಿಸುವಲ್ಲಿ ಎಐಸಿಸಿ ನಾಯಕರು ಯಶಸ್ವಿಯಾಗಿದ್ದಾರೆ.
ಹೌದು.. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕೈ ಹಿರಿಯ ನಾಯಕರು ಸ್ಪೀಕರ್ ಸ್ಥಾನವನ್ನು ಅಲಂಕರಿಸಲು ಹಿಂದೇಟು ಹಾಕಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆರ್.ವಿ ದೇಶಪಾಂಡೆ, ಹೆಚ್.ಕೆ ಪಾಟೀಲ್ ಅವರು ಸಭಾಪತಿ ಸ್ಥಾನವನ್ನು ನಿರಾಕರಣೆ ಮಾಡಿದ ನಂತರ ಟಿ.ಬಿ ಜಯಚಂದ್ರ ಅವರನ್ನು ಸಂಪರ್ಕಿಸಲಾಯಿತು. ಆದ್ರೆ ಅವರು ತಮ್ಮ ಮೊಬೈಲ್‌ನ್ನು ಸ್ವಿಚ್ ಆಪ್ ಮಾಡಿಕೊಂಡಿದ್ದರು.
ಇದರಂದಾಗಿ ಸ್ಪೀಕರ್ ಆಯ್ಕೆ ಕೈ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ನಂತರ ಎಐಸಿಸಿ ನಾಯಕರ ಅಖಾಡಕ್ಕೆ ಇಳಿದು ತಡರಾತ್ರಿ ಯು.ಟಿ ಖಾದರ್ ನ್ನ ಕರೆಸಿಕೊಂಡು ಚರ್ಚೆ ನಡೆಸಿದರು. ಖಾಸಗಿ ಹೋಟೆಲ್‌ಗೆ ಖಾದರ್ ಅವರನ್ನು ಕರೆಸಿಕೊಂಡು ಮನವೊಲಿಕೆ ಮುಂದಾಗಿದ್ದರು. ಸ್ಪೀಕರ್ ಸ್ಥಾನ ಅಲಂಕರಿಸಲು ಹಿರಿಯ ನಾಯಕರು ನಿರಾಕರಿಸಿದ ಕಾರಣ ರಾತ್ರಿಯೇ ಬೆಂಗಳೂರಿಗೆ ಎಐಸಿಸಿ ನಾಯಕರು ಧಾವಿಸಿದ್ದರು.
ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ಉಸ್ತುವಾರಿ ಸುರ್ಜೇವಾಲಾ ಅವರು ಹಿರಿಯ ನಾಯಕರ ಜೊತೆ ಚರ್ಚೆ ನಡೆಸಿದದರು. ಯಾರೂ ಒಪ್ಪಿಕೊಳ್ಳದ ಹಿನ್ನೆಲೆ ಕೊನೆಗೆ ಯು.ಟಿ ಖಾದರ್ ನ್ನ ಕರೆಸಿಕೊಂಡು ಸಮಾಲೋಚನೆ ಮಾಡಲಾಯಿತು. ಅಲ್ಲದೆ ಎರಡು ವರ್ಷಗಳ ನಂತರ ಸಚಿವ ಸ್ಥಾನದ ನೀಡುವುದಾಗಿ ಖಾದರ್ ಅವರಿಗೆ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಎಐಸಿಸಿ ನಾಯಕರ ಭರವಸೆಯಿಂದಾಗಿ ಸ್ಪೀಕರ್ ಸ್ಥಾನಕ್ಕೆ ಒಲ್ಲದ ಮನಸ್ಸಿನಿಂದಲೇ ಖಾದರ್ ಅವರು ಒಪ್ಪಿಕೊಂಡಿದ್ದಾರೆ.