ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇದೆ. ಮತದಾನಕ್ಕೆ ಊರುಗಳಿಗೆ ತೆರಳುವವರಿಗಾಗಿ ನೈಋತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್ಗಳನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ. ಬೆಂಗಳೂರು ಹಾಗೂ ಬೆಳಗಾವಿ ಮಧ್ಯೆ ಒಂದು ವಿಶೇಷ ರೈಲು ಸಂಚರಿಸಲಿವೆ.
ಹುಬ್ಬಳ್ಳಿ ಮಾರ್ಗವಾಗಿ ಈ ರೈಲು ಸಂಚರಿಸಲಿವೆ. ಇನ್ನು ಬೆಂಗಳೂರಿನಿಂದ ಬೀದರ್ಗೆ ಕಲಬುರಗಿ ಮಾರ್ಗವಾಗಿ ಒಂದು ರೈಲು ತೆರಳಲಿದೆ. ಬೆಂಗಳೂರಿನಿಂದ (ಯಶವಂತಪುರ) ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿದೆ.