ಕೂಗು ನಿಮ್ಮದು ಧ್ವನಿ ನಮ್ಮದು

ನಿತ್ಯ ಭವಿಷ್ಯ 05-03-2024 ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ.?

ಪಂಚಾಂಗ ಮಂಗಳವಾರ 05-03-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಮೂಲಾ / ಯೋಗ: ಸಿದ್ಧಿ / ಕರಣ: ವಣಿಜ್

ಸೂರ್ಯೋದಯ : ಬೆ.06.33
ಸೂರ್ಯಾಸ್ತ : 06.29
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ

ಮೇಷ: ಸ್ನೇಹಿತರು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವರು.

ವೃಷಭ: ಮಾನಸಿಕ ಧೈರ್ಯ, ಸಾಮಥ್ರ್ಯ ಹೆಚ್ಚಿಸಿ ಕೊಳ್ಳಲು ಧ್ಯಾನ ಮಾಡುವುದು ಒಳಿತು.

ಮಿಥುನ: ನೆರೆಹೊರೆಯವರೊಂದಿಗಿನ ಸಂಬಂಧ ಸೌಹಾರ್ದಯುತವಾಗಿರುತ್ತದೆ.

ಕಟಕ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.

ಸಿಂಹ: ಸಹೋದ್ಯೋಗಿ ಗಳೊಂದಿಗೆ ಮಾತುಕತೆ ನಡೆಸುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಿ.

ಕನ್ಯಾ: ಅತ್ಯಂತ ಕಷ್ಟಕರವಾದ ಕೆಲಸವನ್ನೂ ಸುಲಭವಾಗಿ ಮಾಡಿ ಮುಗಿಸುವುರಿ.

ತುಲಾ: ಸಂಭಾಷಣೆ ನಡೆಸುವುದರಿಂದ ಉತ್ತಮ ರೀತಿಯ ಸಂಬಂಧಗಳು ರೂಪುಗೊಳ್ಳುತ್ತವೆ.

ವೃಶ್ಚಿಕ: ನಿಮ್ಮ ನಡವಳಿಕೆ ಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.

ಧನುಸ್ಸು: ಹೊಸ ಉದ್ಯೋಗಗಳು ಮತ್ತು ಉದ್ಯೋಗ ಬದಲಾವಣೆಗೆ ಇದು ಉತ್ತಮ ದಿನವಾಗಿದೆ.

ಮಕರ: ಹಿರಿಯರು ಹಾಗೂ ಸಜ್ಜನರನ್ನು ಗೌರವಿಸುವಿರಿ. ಉತ್ತಮ ಪ್ರಗತಿ ಸಾಧಿಸುವಿರಿ.

ಕುಂಭ: ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಅಪಹಾಸ್ಯಕ್ಕ ಈಡಾಗಬೇಡಿ. ಎಚ್ಚರದಿಂದಿರಿ.

ಮೀನ: ಶ್ರಮ ಮತ್ತು ಅದೃಷ್ಟ ಎಲ್ಲಾ ರೀತಿಯಲ್ಲೂ ನಿಮಗೆ ಬೆಂಬಲ ನೀಡುತ್ತದೆ.

error: Content is protected !!