ಕೂಗು ನಿಮ್ಮದು ಧ್ವನಿ ನಮ್ಮದು

ಥೈರಾಯ್ಡ್ ಗ್ರಂಥಿ ಕಾಯಿಲೆ ನಿಯಂತ್ರಣ ಹಾಗೂ ಬೊಜ್ಜು ಕಡಿಮೆ ಮಾಡಲು ಯಾವ ಚಹಾ ಪ್ರಯೋಜನಕಾರಿ?

ಚಹಾ ಇಲ್ಲದೇ ದಿನವನ್ನು ಆರಂಭಿಸುವುದು ತುಂಬಾ ಕಷ್ಟ. ಅದರಲ್ಲೂ ಭಾರತೀಯರು ವಿವಿಧ ರೀತಿಯ ಚಹಾ ಕುಡಿಯುತ್ತಾರೆ. ಹೆಚ್ಚಿನ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭ ಮಾಡುತ್ತಾರೆ. ನಮ್ಮಲ್ಲಿ ಹೆಚ್ಚಿನವರು ತಮ್ಮ ದಿನದ ಬೆಳಗಿನ ಜಾವ ಹಾಲು ಮತ್ತು ಸಕ್ಕರೆಯ ಚಹಾ ಸೇವನೆ ಮಾಡಲು ಬಯಸುತ್ತಾರೆ. ಆದರೆ ಅನೇಕ ಜನರು ಬೆಳಗಿನ ಜಾವ ಹಾಲು ಮತ್ತು ಸಕ್ಕರೆ ಚಹಾ ಸೇವನೆ ಮಾಡುವುದನ್ನು ನಿರಾಕರಣೆ ಮಾಡುತ್ತಾರೆ. ಏಕೆಂದರೆ ಇದು ದೇಹಕ್ಕೆ ಅನೇಕ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ. ಹಾಲು ಚಹಾ, ವಿಶೇಷವಾಗಿ ಥೈರಾಯ್ಡ್ ಇದ್ದವರಿಗೆ ಸಾಕಷ್ಟು ಕೆಟ್ಟದ್ದೆಂದು ಹೇಳಲಾಗಿದೆ.

ಗಿಡಮೂಲಿಕೆ ಚಹಾ ನಿಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ
ಇದು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಅಂತಹ ಸ್ಥಿತಿಯಲ್ಲಿ ಗಿಡಮೂಲಿಕೆ ಚಹಾ ನಿಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಹೇಳಲಾಗುತ್ತದೆ. ನಮ್ಮ ಸುತ್ತಲೂ ಅನೇಕ ಗಿಡಮೂಲಿಕೆ ಚಹಾಗಳಿವೆ. ಗಿಡಮೂಲಿಕೆ ಚಹಾ ಅನೇಕ ರೀತಿಯ ಕಾಯಿಲೆ ಮತ್ತು ಸೋಂಕಿನಿಂದ ಜನರನ್ನು ದೂರವಿಡುವಲ್ಲಿ ಸಾಕಷ್ಟು ಸಹಕಾರಿ ಆಗಿವೆ ಎಂದು ಹೇಳಲಾಗುತ್ತದೆ.

ಇಂತಹ ಆರೋಗ್ಯ ಹೆಚ್ಚಿಸುವ ಗಿಡಮೂಲಿಕೆ ಚಹಾದಲ್ಲಿ ಒಂದು ಕ್ಯಾಮೊಮೈಲ್ ಚಹಾ. ಆರೋಗ್ಯ ಸುಧಾರಣೆ ಮತ್ತು ಕೆಲವು ಕಾಯಿಲೆ ನಿಯಂತ್ರಣಕ್ಕೆ ಕ್ಯಾಮೊಮೈಲ್ ಚಹಾ ತುಂಬಾ ಪ್ರಯೋಜನಕಾರಿ ಆಗಿದೆ. ಪ್ರತಿದಿನ ಕ್ಯಾಮೊಮೈಲ್ ಚಹಾ ಕುಡಿಯುವುದು ಥೈರಾಯ್ಡ್‌ಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಥೈರಾಯ್ಡ್‌ ಸಮಸ್ಯೆ ಹೊಂದಿರುವವರಿಗೆ ಕ್ಯಾಮೊಮೈಲ್ ಟೀ ಕುಡಿಯುವುದು ದೇಹಕ್ಕೆ ಯಾವ ಪ್ರಯೋಜನ ನೀಡುತ್ತದೆ ಎಂದು ಇಲ್ಲಿ ತಿಳಿಯೋಣ. ಕ್ಯಾಮೊಮೈಲ್ ಟೀ ಕುಡಿಯುವ ಪ್ರಯೋಜನಗಳು ಯಾವವು?

ಥೈರಾಯ್ಡ್‌ ಸಮಸ್ಯೆ ಹೊಂದಿರುವವರು, ಅದನ್ನು ನಿಯಂತ್ರಿಸಲು ಹಾಲಿನ ಚಹಾ ಬದಲು ಕ್ಯಾಮೊಮೈಲ್ ಟೀ ಸೇವನೆ ಮಾಡುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ನೈಸರ್ಗಿಕ ರಾಸಾಯನಿಕಗಳು ಇದರಲ್ಲಿ ಕಂಡು ಬರುತ್ತವೆ. ಇದನ್ನು ಫ್ಲೇವನಾಯ್ಡ್ಗಳು ಎಂದು ಕರೆಯುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಥೈರಾಯ್ಡ್ ಸಮಸ್ಯೆ ಹೋಗಲಾಡಿಸಲು ಸಹಾಯಕಾರಿ ಆಗಿದೆ.

ಥೈರಾಯ್ಡ್ ಗ್ರಂಥಿ ಕಾಯಿಲೆಯಲ್ಲಿ ಕ್ಯಾಮೊಮೈಲ್ ಚಹಾ ಹೇಗೆ ಪ್ರಯೋಜನಕಾರಿ ಆಗಿದೆ? ಕ್ಯಾಮೊಮೈಲ್ ಚಹಾ, ಥೈರಾಯ್ಡ್ ಗ್ರಂಥಿ ಕಾಯಿಲೆ ನಿಯಂತ್ರಣಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿ ಆಗಿದೆ. ಥೈರಾಯ್ಡ್ ಗ್ರಂಥಿಯಲ್ಲಿ ಉಂಟಾಗುವ ಸಮಸ್ಯೆ ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಇದು ನಿಮಗೆ ಅನೇಕ ಪ್ರಯೋಜನ ತಂದು ಕೊಡುತ್ತದೆ.

ಕೂದಲು ಉದುರುವುದನ್ನು ತಡೆದು ರಕ್ಷಣೆ ನೀಡುತ್ತದೆ ಥೈರಾಯ್ಡ್‌ ಕಾಯಿಲೆ ನಿಯಂತ್ರಿಸಲು ಕ್ಯಾಮೊಮೈಲ್ ಟೀ ಸೇವನೆಯಿಂದ ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡಬಹುದು. ಆದಾಗ್ಯೂ ಇದು ಥೈರಾಯ್ಡ್ ಸಮಸ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಇದು ಸಮಸ್ಯೆ ತಪ್ಪಿಸುತ್ತದೆ.

ಬೊಜ್ಜು ನಿಯಂತ್ರಣಕ್ಕೆ ಸಹಕಾರಿ ಕ್ಯಾಮೊಮೈಲ್ ಚಹಾ ಸೇವಿಸುವ ಮೂಲಕ ಸ್ಥೂಲಕಾಯ ಸಮಸ್ಯೆ ನಿಯಂತ್ರಿಸಬಹುದು. ಇದರಿಂದ ನಿಮ್ಮ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಬಹುದು. ಥೈರಾಯ್ಡ್‌ನಲ್ಲಿ ಬೊಜ್ಜು ಹೆಚ್ಚಾಗುವ ಸಮಸ್ಯೆ ಕಡಿಮೆ ಮಾಡಲು ಈ ಚಹಾ ಪರಿಣಾಮಕಾರಿ ಆಗಿದೆ.

ರಕ್ತದ ಸಕ್ಕರೆ ನಿಯಂತ್ರಿಸುತ್ತದೆ ಥೈರಾಯ್ಡ್ ಸಮಸ್ಯೆಗಳು ರಕ್ತದ ಸಕ್ಕರೆ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಅಂತಹ ಸ್ಥಿತಿಯಲ್ಲಿ ಕ್ಯಾಮೊಮೈಲ್ ಚಹಾವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಇದು ರಕ್ತದ ಸಕ್ಕರೆ ಸಮಸ್ಯೆ ನಿಯಂತ್ರಿಸುತ್ತದೆ.

error: Content is protected !!