ತರಕಾರಿ, ದಿನಸಿ ಖರೀದಿಗಳಿಗೆ ಈಗಿನಂತೆ ಬೆಳಗಿನ ಅವಧಿಯಲ್ಲಿ ಕೂಡ ಅವಕಾಶವಿಲ್ಲ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 3 ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇಂದು ಹೊಸ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 22, 23 ಹಾಗೂ 24 ನೇ ತಾರೀಖಿನಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಆದೇಶ ಹೊರಡಿಸಲಾಗಿದೆ.
ಮೇ 22 ರ ಬೆಳಗ್ಗೆ 6 ಗಂಟೆಯಿಂದ 24 ರ ಬೆಳಗ್ಗೆ 6 ಗಂಟೆಯವರೆಗೂ ಲಾಕ್ ಡೌನ್ ಇರಲಿದೆ. ಇದು ಈಗಾಗಲೆ ಜಾರಿಯಲ್ಲಿರುವ ಲಾಕ್ ಡೌನ್ ಗಿಂತಲೂ ಕಠಿಣವಾಗಿರಲಿದೆ. ಈ ಅವಧಿಯಲ್ಲಿ ಆಸ್ಪತ್ರೆಗಳಿಗೆ ಸಂಚರಿಸಲು, ಹಾಲು, ಔಷಧಿ ಖರೀದಿಸಲು, ಪೂರೈಸಲು ಮಾತ್ರ ಅವಕಾಶವಿದೆ. ಇನ್ನು ಅಂತರ ಜಿಲ್ಲಾ, ಅಂತರ್ ರಾಜ್ಯ ಸರಕು ಸಾಗಿಣಿಕೆ ವಾಹನಗಳಿಗೆ ಅವಕಾಶವಿದೆ. ಪೂರ್ವಾನುಮತಿ ಪಡೆದುಕೊಂಡು ನಿಗದಿಪಡಿಸಿರುವ ಮದುವೆಗಳಿಗೆ ಅವಕಾಶವಿದೆ. ಅಂದರೆ, ತರಕಾರಿ, ದಿನಸಿ ಖರೀದಿಗಳಿಗೆ ಈಗಿನಂತೆ ಬೆಳಗಿನ ಅವಧಿಯಲ್ಲಿ ಕೂಡ ಅವಕಾಶವಿಲ್ಲ.
ಸಮಗ್ರ ಆದೇಶ ಈ ಕೆಳಗೆ ನೀಡಲಾಗಿದೆ.