ಕೂಗು ನಿಮ್ಮದು ಧ್ವನಿ ನಮ್ಮದು

ಬೈಕ್ ಕೊಡಿಸದ್ದಕ್ಕೆ ಜಗಳವಾಡಿ ಮಗ ನೇಣಿಗೆ ಶರಣು, ವಿಷಯ ತಿಳಿದು ರೈಲಿಗೆ ಕೊರಳೊಡ್ಡಿದ ತಾಯಿ

ಹಾವೇರಿ: ಬೈಕ್ ಕೊಡಿಸದಿದ್ದಕ್ಕೆ ತಾಯಿಯೊಂದಿಗೆ ಜಗವಾಡಿದ ಮಗ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಮಗನ ಆತ್ಮಹತ್ಯೆಯಿಂದ ಮನನೊಂದು ತಾಯಿಯೂ ಕೂಡ ರೈಲಿಗೆ ತಲೆಕೊಟ್ಟು ಸಾವಿನ ಕದ ತಟ್ಟಿರುವ ಹೃದಯ ವಿದ್ರಾವಕ ಘಟನೆ ರಾಣೆಬೆನ್ನೂರ ತಾಲೂಕಿನ ಕರೂರ ಗ್ರಾಮದಲ್ಲಿ ನಡೆದಿದೆ.

ಧನರಾಜ ಸುರೇಶ ನಾಯಕ (18) ಹಾಗೂ ಈತನ ತಾಯಿ ಬಾಗ್ಯಮ್ಮ ನಾಯಕ (43) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಮಗ ಧನರಾಜ, ಬೈಕ್ ತೆಗೆದುಕೊಳ್ಳಲು ಹಣ ಬೇಕೆಂದು ತಂದೆ- ತಾಯಿ ಬಳಿ ನಿನ್ನೆ ಬೆಳಗ್ಗೆ ಜಗಳ ತೆಗೆದಿದ್ದ.

ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬ ಧನರಾಜನಿಗೆ ಬೈಕ್ ಕೊಡಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಮಗ, ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸ್ಥಿತಿ ಕಂಡು ದಂಗಾಗಿದ್ದ ತಾಯಿ, ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಮಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!