ಕೂಗು ನಿಮ್ಮದು ಧ್ವನಿ ನಮ್ಮದು

ಮಹಾಪ್ರಸಾದ ಸೇವೆಗೆ ಚಾಲನೆ ನೀಡಿ ಸ್ವತಃ ಉಣಬಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ತಾಲೂಕಿನ ಬಾಳೇಕುಂದ್ರಿ ಬಿ.ಕೆ.ಗ್ರಾಮದ ಶ್ರೀ ರಾಮೇಶ್ವರ ಮಂದಿರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಭೇಟಿ ನೀಡಿ ದರ್ಶನ ಆಶೀರ್ವಾದ ಪಡೆದರು.

ಶ್ರಾವಣದ ಕೊನೆಯ ಸೋಮವಾರದ ಪ್ರಯುಕ್ತ ಮಹಾಪ್ರಸಾದ ಸೇವೆಗೆ ಚಾಲನೆ ನೀಡಿದ ಅವರು, ಸ್ವತಃ ಭಕ್ತಾದಿಗಳಿಗೆ ಪ್ರಸಾದವನ್ನು ಉಣಬಡಿಸಿದರು.

ಗ್ರಾಮದ ಹಿರಿಯರು, ಯುವರಾಜ ಕದಂ, ಶಂಕರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಕೋಲಕಾರ, ಉಮೇಶರಾವ್ ಜಾಧವ್, ಅಪ್ಸರ್ ಜಮಾದಾರ, ಮೈನುದ್ದೀನ್ ಅಗಸಿಮನಿ, ಜಮೀಲ್ ಕಾಜಿ, ಹೊನಗೌಡ ಪಾಟೀಲ, ಪರಗೌಡ ಪಾಟೀಲ, ವಿನಯ ಪಾಟೀಲ, ಪ್ರವೀಣ ಪಾಟೀಲ, ಸುರೇಶ್ ಕಾಳೋಜಿ, ಪ್ರೇಮ ಕೋಲಕಾರ, ಅಭಿಷೇಕ ಪಾಟೀಲ ಹಾಗೂ ದೇವಸ್ಥಾನದ ಟ್ರಸ್ಟ್ ಕಮಿಟಿಯವರು ಉಪಸ್ಥಿತರಿದ್ದರು.

error: Content is protected !!