ಕೂಗು ನಿಮ್ಮದು ಧ್ವನಿ ನಮ್ಮದು

ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು: ಬೆಳಗಾವಿಯಲ್ಲಿ ಬಿಗುವಿನ ವಾತಾವರಣ

ಬೆಳಗಾವಿ: ತಲವಾರ, ಬರ್ಚಿ ಹಿಡಿದುಕೊಂಡು ಬಂದ ಕಿಡಗೇಡಿಗಳು ರಾಯಣ್ಣ ಸರ್ಕಲ್ ನಲ್ಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಮೂರ್ತಿಯ ಮುಖವನ್ನು ಭಗ್ನಗೊಳಿಸಿ, ಖಡ್ಗವನ್ನು ಮುರಿದು ಮೂರ್ತಿಯ ಕೈಯನ್ನು ಧ್ವಂಸ ಮಾಡಿದ ಘಟನೆ ಮದ್ಯರಾತ್ರಿ ಬೆಳಗಾವಿಯ ಅನಗೋಳದಲ್ಲಿ  ನಡೆದಿದೆ.

ಸಂಗೊಳ್ಳಿ ರಾಯಣ್ಣನ ಮೂರ್ತಿಯ ರಕ್ಷಣೆಗಾಗಿ ರಾಯಣ್ಣನ ಅಭಿಮಾನಿಗಳು ರಾತ್ರಿ ಹೊತ್ತು ಅಲ್ಲಿಯೇ ಇದ್ರು ಮದ್ಯರಾತ್ರಿ ಏಕಾಏಕಿ ದಾಳಿ ಮಾಡಿದ ಕಿಡಗೇಡಿಗಳು ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಸಂಪೂರ್ಣವಾಗಿ ಭಗ್ನಗೊಳಿಸಿದ್ದಾರೆ.

ರಾಯಣ್ಣನ ಮೂರ್ತಿ ಭಗ್ನಗೊಳಿಸಿರುವ ವಿಚಾರವನ್ನು ಮೂರ್ತಿ ಕಾಯುತ್ತಿದ್ದ ಅಭಿಮಾನಿಗಳು ಪೋಲೀಸರಿಗೆ ತಿಳಿಸುತ್ತಿದ್ದಂತೆಯೇ ಪೋಲೀಸರು ಸ್ಥಳಕ್ಕೆ ದೌಡಾಯಿಸಿ, ಮೂರ್ತಿಯನ್ನೇ ಅಲ್ಲಿಂದ ತೆರವು ಮಾಡಿದ್ದಾರೆ. ರಾಯಣ್ಣನ ಅಭಿಮಾನಿಗಳು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆ ಬಳಿ ಸಮಾವೇಶಗೊಳ್ಳುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಪೋಲೀಸ್ ಫೋರ್ಸ್ ದೌಡಾಯಿಸಿದೆ.

error: Content is protected !!