ದಾವಣಗೆರೆ: ಯಡಿಯೂರಪ್ಪ ಅವರ ಪರವಾಗಿ 65 ಶಾಸಕರ ಸಹಿಸಂಗ್ರಹಿಸಿದ್ದು ಸತ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸಿಎಂ ಹಾಗೂ ಪಕ್ಷದ ವರಿಷ್ಠರು ಹೇಳಿದ್ದಕ್ಕೆ ಸುಮ್ನನಾಗಿದ್ದೇವೆ ಎಂದು ಹೊನ್ನಾಳಿಯ ಅರಬಗಟ್ಟ ಕೋವಿಡ್ ಕೇರ್ ಸೆಂಟರ್ ನಲ್ಲಿ ಮಾತನಾಡಿದ ರೇಣುಕಾಚಾರ್ಯ, ಧಾರವಾಡ ಹಾಗೂ ವಿಜಯಪುರ ಶಾಸಕರು ಇಂತಹ ಇಂತಹ ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದವರ ಆರೋಗ್ಯ ವಿಚಾರಣೆಗೆ ತೆರಳಿದ್ದ ವೇಳೆ ರೇಣುಕಾಚಾರ್ಯ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ. ಈಗಾಗಲೇ ನನಗೆ ಪಕ್ಷದ ರಾಜ್ಯ ಉಸ್ತುವಾರಿಗಳು ಸಮಯ ನೀಡಿದ್ದಾರೆ. ಮೇಲಾಗಿ ನಮ್ಮ ಎಲ್ಲ ಶಾಸಕರು ಒಟ್ಟಾಗಿ ಉಸ್ತುವಾರಿಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಸಾದ್ಯವೆ ಇಲ್ಲ. ಯಾರೋ ಇಬ್ಬರು, ಮೂರು ಜನ ದೆಹಲಿಗೆ ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿ ಬಂದರೆ ಬದಲಾವಣೆ ಅಸಾದ್ಯ ಎಂದಿರುವ ಅವರು ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆಯ ಆಗುತ್ತೆ ಅಂತ ತಿರುಕನ ಕನಸು ಕಾಣುತ್ತಿರುವುದು ವಿಚಿತ್ರವಾಗಿದೆ ಎಂದು ವ್ಯಂಗ್ಯವಾಡಿದ್ರು.