ಕೂಗು ನಿಮ್ಮದು ಧ್ವನಿ ನಮ್ಮದು

ಗೋಕಾಕ್ ಪೊಲೀಸರ ವಿರುದ್ದದ ಆರೋಪ ಸುಳ್ಳು: ಫೋಟೊ ರಿವಿಲ್ ಮಾಡಿದ ಯುವಕನ ಕುಟುಂಬಸ್ಥರು..!?

ಬೆಳಗಾವಿ: ಕಳೆದ ನಾಲ್ಕೈದು ದಿನಗಳಿಂದ ಸದ್ದು ಮಾಡುತ್ತಿರುವ ಗೋಕಾಕ್ ಪೊಲೀಸರ ವಿರುದ್ದದ ಆರೋಪ ಪ್ರಕರಣ ಇದೀಗ ಮಹತ್ವ ಕಳೆದುಕೊಂಡಿದೆ. ಗೋಕಾಕ್ ಪೊಲೀಸರ ವಿರುದ್ದ ಮಾಡಿರುವ ಹಣ ತೆಗೆದುಕೊಂಡ ಆರೋಪ ಶುದ್ದ ಸುಳ್ಳು ಎಂದು ಪ್ರತಿಕಾಗೋಷ್ಟಿ ನಡೆಸಿ ಮಾತನಾಡಿದ ಕೊಲೆಯಾದ ಯುವಕನ ಮನೆಯವ್ರು, ಕೆಲ ಮಹತ್ವದ ಫೋಟೋಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆಗೊಳಿಸಿದ್ದಾರೆ.

ತಮ್ಮ ಮಗನ ಕೊಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ, ಇದರಲ್ಲಿ ವಿನಾಕಾರಣ ಪೊಲೀಸರ ಮೇಲೆ ಆರೋಪ ಮಾಡಿ ಪ್ರಕರಣದ ದಾರಿ ತಪ್ಪಿಸಲಾಗುತ್ತಿದೆ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಕೊಲೆಯಾದ ಯುವಕನ ಕುಟುಂಬಸ್ಥರು ಕಣ್ಣಿರಿಡುತ್ತ ತಮ್ಮ ಅಳಲು ತೊಡಿಕೊಂಡಿದ್ದಾರೆ.

ಇನ್ನು ಕೊಲೆಯಾದ ಯುವಕನನ್ನು ಪ್ರಿತಿಸುತಿದ್ದ ಯುವತಿಯ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ. ಕೊಲೆಯಾದ ಮಂಜು ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಅವರಿಬ್ಬರ ಪ್ರೀತಿಗೆ ಸಾಕ್ಷಿಯೆಂಬಂತೆ ಅವರಿಬ್ಬರೂ ಅತೀ ಸಲುಗೆಯಿಂದ ಇರುವ ಮತ್ತು ನೊಡಲಿಕ್ಕಾಗದ ಕೆಲವು ಫೋಟೊಗಳು ನಮ್ಮ ಬಳಿ ಇವೆ ಎಂದಿದ್ದಾರೆ. ಅವುಗಳಲ್ಲಿ ಕೆಲವು ಫೋಟೋಗಳನ್ನು ಮಾದ್ಯಮಗಳ ಮುಂದೆ ಪ್ರದರ್ಶನ ಮಾಡಿದ ಕೊಲೆಯಾದ ಯುವಕನ ಕುಟುಂಬಸ್ಥರು, ಕಣ್ಣಿರುಡತ್ತಲೇ ಪೊಲೀಸರಿಗೆ ನೈತಿಕ ಬೆಂಬಲ ನೀಡಿದರು.

ಗೋಕಾಕ್ ಪೊಲೀಸರು ಈ ಪ್ರಕರಣದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಅವರ ಮೇಲೆ ಗಂಭೀರ ಆರೋಪ ಮಾಡುವ ಮೂಲಕ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ನಮ್ಮ ಮಗನ ಕೊಲೆ ಪ್ರಕರಣದ ದಾರಿ ತಪ್ಪಿಸುವ ವ್ಯವಸ್ಥಿತ ಕೆಲಸ ಮಾಡಲಾಗುತ್ತಿದೆ ಎಂದ ಮಂಜು ಕುಟುಂಬ ಸದಸ್ಯರು, ಈ ಫೋಟೋಗಳನ್ನು ನೊಡಿದ ಮೇಲೆಯಾದರೂ ಈ ಕೊಲೆಯ ಹಿಂದಿನ ಕಾಣದ ಕೈಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇನ್ನು ಇದೇ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಮಾನ್ಯ ಉಚ್ಚ ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಆರೋಪಿ ಸಿದ್ದಪ್ಪ ಬಬಲಿ, ಇದೀಗ ನಮಗೆ ಧಮಕಿ ಹಾಕುತ್ತಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆ ಮಾಡಿಕೊಳ್ಳಲು ಹಣದ ಆಮಿಷ ನೀಡುತ್ತಿದ್ದು, ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಹೀಗಾಗಿ, ನಮ್ಮ ಕುಟುಂಬದದವರಿಗೆ ರಕ್ಷಣೆ ನೀಡಿ, ಆರೋಪಿತರ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸುವಂತೆ ಮಾದ್ಯಮಗಳ ಮೂಲಕ ಕೊಲೆಯಾದ ಮಂಜು ಸಹೋದರಿ ಸಿದ್ದವ್ವ ಮುರ್ಕಿಭಾವಿ ಹಾಗೂ ಸಹೋದರ ವಿಠ್ಠಲ್ ಮುರ್ಕಿಭಾವಿ ಮನವಿ ಮಾಡಿಕೊಂಡರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಯುವಕನ ಕುಟುಂಬಸ್ಥರಾದ ಶಂಕರ ಮುರ್ಕಿಬಾಂವಿ, ಲಕ್ಷ್ಮಣ ಮುರ್ಕಿಬಾಂವಿ, ರೇಖಾ ಮುರ್ಕಿಬಾಂವಿ, ರೇಣುಕಾ ಕಡಕೋಳ ಮತ್ತಿತರರು ಭಾಗವಹಿಸಿದ್ದರು.

ಪೊಲೀಸರ ವಿರುದ್ದದ ಆರೋಪದ ಹಿನ್ನೆಲೆ

ಕಳೆದ ಜೂನ್ 2021 ರಂದು ಗೋಕಾಕ ತಾಲೂಕಿನ ಮಹಾಂತೇಶ ನಗರ ಬಡಾವಣೆಯ ಮಾಲದಿನ್ನಿ ಕ್ರಾಸ್ ಬಳಿ ಸಂಜೆ 7ಕ್ಕೆ ಮಂಜು ಶಂಕರ ಮುರುಕಿಬಾವಿ ಎಂಬ ಯುವಕನ ಅನುಮಾನಸ್ಪಾದವಾಗಿ ಕೊಲೆಯಾಗಿದ್ದಾನೆ. ಈತನಿಗೂ ನಮ್ಮ ಮಕ್ಕಳಿಗೆ ಯಾವುದೇ ಸಂಬಂಧ ಇಲ್ಲ. ಬಸಪ್ಪ ರಂಗೇನಕೊಪ್ಪ ಈತನ ಹೇಳಿಕೆಯ ಅಧಾರದ ಮೇಲೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಕ್ಕಳಿಗೆ ಮನಸೋ‌ ಇಚ್ಚೆ ಥಳಿಸಿದ್ದಾರೆ. ನನ್ನ ಪತಿ ಸಿದ್ಧಪ್ಪ ಪೊಲೀಸ್ ಠಾಣೆಗೆ ವಿಚಾರಿಸಲು ತೆರಳಿದಾಗ ಲಾಕಪ್‌ನಲ್ಲಿ ಹಾಕಿ ಅವರಿಗೂ ಥಳಿಸಿದ್ದಾರೆ ಎಂದು ಆರೋಪಿತ ಕುಟುಂಬದವರು ಮೊನ್ನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾದ್ಯಮಗಳ ಮುಂದೆ ದೂರಿದ್ದರು.

error: Content is protected !!