ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಕ್ಕಿನಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಲಕ್ಷ್ಮೀ ದೇವಿ ಮಂದಿರದ ವಾಸ್ತುಶಾಂತಿ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿ, ದೇವಸ್ಥಾನವನ್ನು ಉದ್ಘಾಟಿಸಿದರು.
ಗ್ರಾಮೀಣ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಳೆದ 6 ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಕ್ಷೇತ್ರದ ಚಿತ್ರಣ ಈ ಅವಧಿಯಲ್ಲಿ ಸಾಕಷ್ಟು ಬದಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಹ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಯುವರಾಜ ಕದಂ, ಜಯವಂತ ಸಾವಂತ, ನಾರಾಯಣ ಬಂಡಾರಗೆ, ಅರುಣ ಗಾವಡೆ, ಮಾರುತಿ ಖಾದರವಾಡ್ಕರ್, ನಾರಾಯಣ ಸಾವಂತ, ಮಲ್ಲಪ್ಪ ಗಾವಡೆ, ಗಾವಡು ಗಾವಡೆ, ನಾಗೇಶ ಬಾಳೇಕುಂದ್ರಿ, ನಾರಾಯಣ ಬಾಳೇಕುಂದ್ರಿ, ನಾರಾಯಣ ಬೆಳಗಾಂವ್ಕರ್, ಮಹಾದೇವ ಬಿ. ಚಬ್ಬುಬಾಯಿ ಕಾಂಬಳೆ, ಅರುಣ ಬೋಗನ್, ಮಲಪ್ರಭಾ ಗಾವಡೆ, ಬೇಬಿತಾಯಿ ಗಾವಡೆ, ಲಕ್ಷ್ಮೀ ಗಾವಡೆ, ಎಸ್. ಎಲ್. ಚೌಗುಲೆ, ಕಲ್ಪನಾ ಕಾಂಬಳೆ, ರಘುನಾಥ್ ಖಂಡೇಕರ್, ಮನೋಹರ್ ಬೆಳಗಾಂವ್ಕರ್, ಬಾಳಕೃಷ್ಣ ತೆರಸೆ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಇದ್ದರು.