ಕೂಗು ನಿಮ್ಮದು ಧ್ವನಿ ನಮ್ಮದು

ಮಗು ಪ್ರವೇಶ ಮಾಡಿ ದೇಗುಲ ಅಪವಿತ್ರವಾಯ್ತೆಂದು ಪೋಷಕರಿಗೆ ಹತ್ತು ಸಾವಿರ ದಂಡ!

ಕೊಪ್ಪಳ: ದಲಿತರ ಮಗು ದೇವಸ್ಥಾನದಲ್ಲಿ ಪ್ರವೇಶ ಮಾಡಿದ್ದಕ್ಕೆ ದೇವಾಲಯ ಅಪವಿತ್ರ ಆಗಿದೆ ಎಂದು ಹೇಳಿ ದೇವಸ್ಥಾನವನ್ನು ಶುದ್ಧೀಕರಣ ಮಾಡಿದ್ದಲ್ಲದೆ ಆ ಮಗುವಿನ ಪೋಷಕರಿಗೆ ದೇವಸ್ಥಾನದ ಶುದ್ಧೀಕರಣದ ಹೆಸರಲ್ಲಿ ಹತ್ತು ಸಾವಿರ ರೂಪಾಯಿಯನ್ನು ದಂಡ ಹಾಕಲಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಚನ್ನದಾಸರ ಸಮುದಾಯದ ಮಗು ಒಂದು ಗ್ರಾಮದ ಆಂಜನೇಯ ದೇವಾಲಯಕ್ಕೆ ಪ್ರವೇಶಿಸಿದೆ. ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದೇವಸ್ಥಾನ ಅಪವಿತ್ರವಾಗಿದೆ ಎಂದು ಸವರ್ಣಿಯರು ದೇವಾಲಯವನ್ನು ಶುದ್ದಿಕರಿಸಿದ್ರು. ದೇವಸ್ಥಾನ ಶುದ್ಧೀಕರಣದ ಖರ್ಚಿಗಾಗಿ ಹತ್ತು ಸಾವಿರ ರೂಪಾಯಿ ದಂಡ ಸಹ ವಿಧಿಸಿದ್ರು.

ಗ್ರಾಮದ ಸವರ್ಣಿಯರು ಸಭೆ ನಡೆಸಿ ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ರು. ಬಳಿಕ ಇದನ್ನು ವಿರೋಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆಯನ್ನು ಮಾಡಿತ್ತು. ದೇಗುಲವನ್ನು ಪ್ರವೇಶ ಮಾಡಿರೋ ದಲಿತ ಮಗುವಿನ ಕುಟುಂಬಕ್ಕೆ ದಂಡ ವಿಧಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಜೀವಂತ ಇರಿಸಿದ್ದು ತಡವಾಗಿ ಬೆಳಕಿಗೆ ಬಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಭೆ ಮಾಡಿದ್ರು. ಬಳಿಕ ಕುಷ್ಟಗಿ ಗ್ರಾಮಕ್ಕೆ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದ್ರು.

error: Content is protected !!