ಕೂಗು ನಿಮ್ಮದು ಧ್ವನಿ ನಮ್ಮದು

ಓಡಿಶಾ ರೈಲು ದುರಂತ : ಸಂತ್ರಸ್ತರ ನೆರವಿಗೆ ಸಹಾಯವಾಣಿ ನೀಡಿದ ಸೋನು ಸೂದ್‌..!

ಓಡಿಶಾದಲ್ಲಿ ನಡೆದ ದುರಂತದಿಂದ ಇಡೀ ದೇಶವೇ ಮೌನ ತಾಳಿತ್ತು. ಸಂತ್ರಸ್ತರ ಕುಟುಂಬಕ್ಕೆ ಹಲವು ಸಿನಿಮಾ ನಟರು ಸಂತಾಪ ವ್ಯಕ್ತಪಡಿಸಿದ್ದರು. ಅದೇ ರೀತಿ ಬಾಲಿವುಡ್‌ನ ಖ್ಯಾತ ನಟ ಸೋನು ಸೂದ್‌ ಅವರು ಸಹ ಸಂತಾಪ ತಿಳಿಸಿದ್ದರು. ಇದೀಗ ಸೋನು ಸೂದ್‌ ತಾವು ಭರವಸೆ ನೀಡುತ್ತೇನೆ ಎಂದು ಹೇಳಿದ ಮಾತಿನಂತೆ ನಡೆಕೊಳ್ಳುತ್ತಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ನೆವಾಗುವ ಸಲುವಾಗಿ ಸಹಾಯವಾಣಿಯನ್ನು ಒದಗಿಸಿದ್ದಾರೆ.

ಈ ಕುರಿತು ಸೋನು ಸೂದ್‌ ಅವರು ಟ್ವೀಟ್‌ ಮಾಡಿದ್ದು, ʼಓಡಿಶಾ ರೈಲು ದುರಂತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವಾಗಲು ನಮ್ಮ ಸೂದ್‌ ಚಾರಿಟಿ ಟ್ರಸ್ಟ್‌ ವತಿಯಿಂದ ಸಹಾಯವಾಣಿಯನ್ನು ಆರಂಭಿಸಿದ್ದೇವೆ. ಅಪಘಾತದಲ್ಲಿ ಮನೆಗೆ ಆಧಾರವಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದ ಸದಸ್ಯರಿಗೆ ಕೆಲಸ ಕೊಡಿಸುವ ಅಥವಾ ಕುಟುಂಬ ಇರುವ ಜಾಗದಲ್ಲಿಯೇ ಸಣ್ಣ ಪುಟ್ಟ ವ್ಯಾಪಾಗಳಬನ್ನು ನಡೆಸಲು ಹಣಕಾಸಿನ ನೆರವು ಮತ್ತು ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಕವಾಗುವ ಉದ್ದೇಶದಿಂದ ಈ ಸಹಾಯವಾಣಿ ಪ್ರಾರಂಭಿಸಿದ್ದೇವೆ. ಸಂತ್ರಸ್ತರ ಕುಟುಂಬಗಳ ಸದಸ್ಯರು ಅಥವಾ ಅವರ ಬಗ್ಗೆ ತಿಳಿದವರು ತಮ್ಮ ವಿವರಗಳನ್ನು ಸಂದೇಶದ ಮೂಲಕ ಈ ಸಹಾಯವಾಣಿಗೆ ತಲುಪಿಸಿʼ ಎಂದಿದ್ದಾರೆ.

ರೈಲು ದುರಂತದಲ್ಲಿ ಮೃತಪಟ್ಟ ಅಥವಾ ಗಂಭೀರ ಗಾಯಗೊಂಡ ಕುಟುಂಬದ ಸದಸ್ಯರು +91 996756520 ಈ ಸಹಾಯವಾಣಿಗೆ ಸಂದೇಶದ ಮೂಲಕ ಅವರ ಅಗತ್ಯ ನೆರವುಗಳನ್ನು ಪೊರೈಸೋಣ. ಈ ಸಹಾಯವಾಣಿ ಕೇವಲ ಓಡಿಶಾ ರೈಲು ದುರಂತದ ಸಂತ್ರಸ್ತರಿಗೆ ಸಹಾಯವಾಗಲು ಮಾತ್ರ ಕಾರ್ಯ ನಿರ್ವಹಿಸಲಿದೆ.

ಓಡಿಶಾ ದುತಂತ ಸಂಭವಿಸಿದ ನಂತರ ಸಂತಾಪ ವ್ಯಕ್ತಪಡಿಸಿದ ಸೋನು ಸೂದ್‌ ಅವರು ಅಪಘಾತದಲ್ಲಿ ಗಾಯಗೊಂಡವರಿಗೆ ಹಾಗೂ ಆಧಾರವಾಗಿದ್ದ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಸಾಕಾಗುವುದಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರಕ್ಕಾಗಿ ನೀತಿಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದರು.

error: Content is protected !!