ಕೂಗು ನಿಮ್ಮದು ಧ್ವನಿ ನಮ್ಮದು

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಸ್ವ ಸಂಗ್ರಹ ಗುರಿ ಹೆಚ್ಚಿಸಲು ಚಿಂತನೆ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಸ್ವ ಸಂಗ್ರಹ ಗುರಿ ಹೆಚ್ಚಿಸಲು ಚಿಂತನೆ, ಹೊಸ ಮನೆ ಕಟ್ಟವರಿಗೆ ಎದುರಾಯ್ತು ಶಾಕ್. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಸ್ವ ಸಂಗ್ರಹ ಗುರಿ ಹೆಚ್ಚಿಸಲು ಚಿಂತನೆ ನಡೆದಿದ್ದು ಜಲ್ಲಿಕಲ್ಲು, ಮರಳು ಸೇರಿ ಹಲವು ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ.

ರಾಜ್ಯ ಸರಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಬ್ಬಿಣದ ಅದಿರು, ಜಲ್ಲಿಕಲ್ಲು, ಸೈಜ್‍ಕಲ್ಲು, ಗ್ರಾನೈಟ್, ಮರಳು, ಎಂ.ಸ್ಟಾಂಡ್, ಬೋಲ್ಡರ್ಸ್, ದಿಂಡುಗಲ್ಲು, ಕರಿಕಲ್ಲು, ಬಿಳಿಕಲ್ಲು, ಮಲ್ಟಿ ಕಲರ್ ಗ್ರಾನೈಟ್, ಡೋಲೋಮೈಟ್, ಸಿಲಿಕಾನ್, ಅಲಂಕಾರಿಕ ಶಿಲೆ. ಇವುಗಳ ಮೇಲೆ ರಾಯಲ್ಟಿ ಹೆಚ್ಚಿಸಲು ಚಿಂತನೆಯಿದ್ದು ಇವುಗಳ ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ.

error: Content is protected !!