ಕೂಗು ನಿಮ್ಮದು ಧ್ವನಿ ನಮ್ಮದು

ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡ ಸ್ನೇಕ್ ಕ್ಯಾಚಾರ್ ಆ್ಯಂಡ್ ಮಾಸ್ಟರ್ ದುರಂತ ಸಾವು

ಬಾಗಲಕೋಟೆ: ತನ್ನ ಕಾಯಕದ ಜೊತೆಗೆ ಕೆಲವೊಮ್ಮೆ ಅಲ್ಲಿ ಇಲ್ಲಿ ಗ್ರಾಮದ ಮನೆಗಳಲ್ಲಿ ತೋಟದಲ್ಲಿ ಕಂಡು ಬರುವ ಹಾವುಗಳನ್ನು ಹಿಡಿದು, ಅವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡುಗಳಿಗೆ ಬಿಟ್ಟು ಬರುವ ಕಾಯಕದಲ್ಲಿ 30 ವರ್ಷದ ಸದಾಶಿವ ಕರಣಿ ಮಾಡುತ್ತಿದ್ದ. ಆದರೆ ಆತನ್ನ ಟೈಮ್ ಸರಿ ಇರಲಿಲ್ಲ ಅನ್ನಸುತ್ತೆ, ನಾಗರ ಹಾವು ಹಿಡಿಯಲು ಪ್ರಯತ್ನಿಸಿ ಕಚ್ಚಿಸಿಕೊಂಡ ಸದಾಶಿವ ಮೃತ ಪಟ್ಟಿದ್ದಾನೆ. ಇಂತಹ ಘಟನೆಯೊಂದು ನಡೆದಿದ್ದು ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ. ಈ ಪೋಸ್ಟ್ ಈಗ ವಾಟ್ಸ್ ಆಪ್ ನಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ, ಬಾಗಲಕೋಟೆ ಜಿಲ್ಲೆಯ ಕಳಸಕೊಪ್ಪ ಗ್ರಾಮದ ಈ ಸದಾಶಿವ ಎಂತಹ ಹಾವುಗಳನ್ನು ಸಹ ಹಿಡಿಯಲು ಎತ್ತಿದ ಕೈ ಎಲ್ಲರೂ ಈತನ್ನಿಗೆ ಸ್ನೇಕ್ ಕ್ಯಾಚರ್ ಎಂದೇ ಗುರುತಿಸಿ ಗೌರವ ಕೊಡುತ್ತಿದ್ದರು. ಇನ್ನು ಸದಾಶಿವ ಎಂತಹ ಹಾವುಗಳನ್ನು ಸಹ ಹಿಡಿದು ಅವುಗಳ ಜೊತೆ ಆಟವನ್ನು ಆಡಿ ಕೆಲ ಸಮಯ ನೆರದ ಜನರನ್ನು ರಂಜಿಸುತ್ತಿದ್ದ. ತಲೆಯ ಮೇಲೆ ಹಾವುಗಳನ್ನು ಇಟ್ಟುಕೊಂಡು, ಕೈಯಲ್ಲಿ ಹಾವುಗಳನ್ನು ಆಡಿಸುತ್ತಿದ್ದ.

ಬುಧವಾರ ಅಷ್ಟೇ ಹೊಲದಲ್ಲಿ ನಾಗರ ಹಾವು ಹಿಡಿಯಲು ಪ್ರಯತ್ನಿಸಿ ಕಚ್ಚಿಸಿಕೊಂಡಿದ್ದಾನೆ, ನಂತರ ತಾನೇ ಮನೆಗೆ ಬಂದು ಗಿಡಮೂಲಿಕೆಯ ಔಷಧಿಯನ್ನು ಪಡೆದು ಚಿಕಿತ್ಸೆ ಮಾಡಿಕೊಂಡಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ಸದಾಶಿವ ಮೃತ ಪಟ್ಟಿದ್ದಾನೆ. ಇನ್ನು ಈತನ್ನ ತಂದೆಯು ಸಹ ಹಾವುಗಳನ್ನು ಹಿಡಿಯುವ ಹವ್ಯಾಸ ಹೊಂದಿದ್ದರು. ವಿಪರ್ಯಾಸವೆಂದರೆ ಕೊನೆಗೆ ಮಗ ಹಾವಿನಿಂದಲೇ ಮೃತ ಪಟ್ಟಿರುವುದು ದುರಂತ. ಇನ್ನು ಈ ಘಟನೆಯಿಂದ ಸದಾಶಿವನನ್ನು ನಂಬಿದ ಕುಟುಂಬದ ಗತಿ ಏನು ಎಂಬ ಪ್ರಶ್ನೆ ಮೂಡುತ್ತದೆ.

error: Content is protected !!