ಬೆಂಗಳೂರು: ಗೃಹ ಸಚಿವರ ಜಿಲ್ಲೆಯಲ್ಲೇ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ನಿರ್ವಹಿಸಲಾಗದ ಗೃಹ ಸಚಿವ ರಾಜೀನಾಮೆ ನಿಡ್ಲಿ ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಶಿವಮೊಗ್ಗ ಕೊಲೆ ಪ್ರಕರಣ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರ್ದು ತಪ್ಪಿತಸ್ಥರು ಯಾರೇ ಇರ್ಲಿ ಕಠಿಣ ಶಿಕ್ಷೆ ಆಗಬೇಕು. ಇದು ಸರ್ಕಾರದ ವೈಫಲ್ಯ. ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟವರು.
ಯುವಕನ ಕೊಲೆಯಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಯಾರದ್ದೇ ಕೊಲೆಯಾದರೂ ಕಠಿಣ ಶಿಕ್ಷೆ ಆಗಬೇಕು. ಕೊಲೆಯನ್ನು ಖಂಡಿಸುತ್ತೇವೆ. ಹರ್ಷ ಎಂಬ ಯುವಕನ ಕೊಲೆಯಾಗಿದೆ. ಕಾರಿನಲ್ಲಿ ಬಂದು ಕೊಲೆ ಮಾಡಲಾಗಿದೆ. ತಪ್ಪಿತಸ್ಥರು ಯಾರೇ ಇರಲಿ, ಯಾವುದೇ ಸಂಘಟನೆ ಆದ್ರು, ಕಠಿಣ ಕ್ರಮ ತೆಗೆದುಕೊಳ್ಳಲಿ. ಗೃಹಸಚಿವರು ಅದೇ ಜಿಲ್ಲೆಯವರು. ಇದಕ್ಕೆ ಸರ್ಕಾರ ಜವಾಬ್ದಾರರಲ್ವಾ? ಹೋಮ್ ಮಿನಿಸ್ಟರ್ ಹಾಗೂ ಈಶ್ವರಪ್ಪ ಜವಾಬ್ದಾರರಲ್ವಾ? ಇಂತಹ ವಿಚಾರದಲ್ಲಿ ಕಾಂಗ್ರೆಸ್ ಅಂತ ಹೇಳಬಾರದು. ಪಸ್ಟ್ ಅರೆಸ್ಟ್ ಮಾಡಿ. ತಪ್ಪಿತಸ್ಥರನ್ನು ಪತ್ತೆ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಧಿವೇಶನ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಅಪಮಾನ ಆಗಿದೆ. ಹೇಗಿದ್ದರೂ ಧರಣಿ ಮಾಡುತ್ತಾರೆ ಅಂತ ಗೊತ್ತಿದೆ. ಅವರಿಗೆ ಬಿಟ್ ಕಾಯಿನ್, ಬೇರೆ ಬೇರೆ ವಿಚಾರ ಚರ್ಚೆ ಮಾಡಬಹುದಿತ್ತು. ಆದ್ರೆ ಇಡೀ ಭಾರತ ದೇಶದ ಗೌರವದ ಸಂಕೇತಕ್ಕೆ ಅವಮಾನ ಮಾಡಿದಾಗ ಸುಮ್ಮನೆ ಕೂರಲು ಆಗಲ್ಲ. ರಾಜೀನಾಮೆ ಕೊಡಲು ಸಾಧ್ಯವಿಲ್ಲ ಅಂತ ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. JDS ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಅವರು ಅಸೆಂಬ್ಲಿಗೆ ಸರಿಯಾಗಿ ಬರಲ್ಲ. ಅವರೂ ಮಾಡ್ಲಿ, ನಮ್ಮದೇನು ತಕರಾರು ಇಲ್ಲ. ಅವರಿಗೆ ಅವಕಾಶ ತಪ್ಪಿಸಬೇಕು ಅಂತ ನಾವು ಮಾಡಿಲ್ಲ. ಅಧಿಕೃತ ವಿರೋಧ ಪಕ್ಷ ನಾವು, ನಾವು ಚರ್ಚೆ ಮಾಡುತ್ತಿದ್ದೇವೆ ಎಂದು ಹೇಳಿದ್ರು.