ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿ ಶಾಸಕರೇ ಪರ್ಸೆಂಟೆಜ್ ನೀಡಿ ಅನುದಾನ ಪಡೆಯುತ್ತಿದ್ದಾರೆ: ಬೆಳಗಾವಿಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರದಿಂದ ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊರತೆ, ಅನುದಾನ ನೀಡುತ್ತಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡುತ್ತಿಲ್ಲ.. ಸರ್ಕಾರದಲ್ಲಿ ಹಣವಿಲ್ಲ‌. ಲಂಚ ಕೊಡುವವರಿಗೆ ಮಾತ್ರ ಈ ಸರ್ಕಾರ ಅನುಧಾನ ಬಿಡುಗಡೆ ಮಾಡುತ್ತಿದೆ. ಇದು ಪರ್ಸೆಟೆಂಜ್ ಸರಕಾರ. ಬಿಜೆಪಿ ಎಂಎಲ್ ಎ ಇರುವ ಕಡೆಯೂ ಪರ್ಸೆಂಟೆಜ್ ನೀಡಿ ಅನುಧಾನ ಪಡೆಯುತ್ತಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರಕಾರ ಪರ್ಸೆಟೆಂಜ್ ಸರಕಾರ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇದು ಮೊದಲನೇ ಬಾರಿ ನೋಡಿದ್ದೇನೆ ಎಂದ್ರು. ಇನ್ನು ಕಾಂಗ್ರೆಸ್ ನ್ನು ಅರಬಿ ಸಮುದ್ರಕ್ಕೆ ಎಸೆಯಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ, ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಟೀಲ್ ಒಬ್ಬ ಯಕಶ್ಚಿತ ರಾಜಕಾರಣಿ. ಬಿಜೆಪಿಯ ಅಧ್ಯಕ್ಷ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು. ಕಾಂಗ್ರೆಸ್ ನ್ನು ಅರಬಿ ಸಮುದ್ರಕ್ಕೆ ಎಸೆಯಬೇಕು ಎನ್ನುತ್ತಾನೆ ಎಂದರೆ ಏನು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಇದೇ ವೇಳೆ ಮಾತನಾಡುತ್ತ, ಬಿಜೆಪಿ ಕಾಲದಲ್ಲಿ ಆತ್ಮಹತ್ಯೆ ನಿಂತಿದೆಯಾ..? ನೇಕಾರರ ಆತ್ಮಹತ್ಯೆ ಯಾಕೆ ಆಗುತ್ತಿದೆ ಹೇಳಪ್ಪ ನಳೀನ್ ಕುಮಾರ ಕಟೀಲ್ ಎಂದು ಸಿದ್ದರಾಮಯ್ಯ ಕುಟುಕಿದರು. ಈ ಸರಕಾರದಲ್ಲಿ ದುಡ್ಡೇ ಇಲ್ಲ. ಅನುದಾನ ನೀಡಿ ಎಂದರೆ ಹಣ ಇಲ್ಲ ಅಂಥಾ ರಾಮುಲು ಹೇಳ್ತಾರೆ ಈ ತರಾ ಅವರೇ ಹೇಳಿದ್ದು. ಪ್ರವಾಹದಲ್ಲಿ ಮನೆ ಬಿದ್ದರವರಿಗೆ ಯಾರಿಗೆ ಹಣ ನೀಡಿದ್ದಾರೆ ಎಂದ ಸಿದ್ದು, ಜಿಲ್ಲಾಧಿಕಾರಿ ಖಾತೆಯಲ್ಲಿ ಹಣವಿದ್ದರೆ ಸಂತ್ರಸ್ತರಿಗೆ ತಲುಪಬೇಕಲ್ಲ ಎಂದ್ರು. ಇನ್ನು ಬಾರೋ ಬಾರೋ ಮಳೆರಾಯ ಹುವಿನ ತೋಟಕ್ಕೆ ನೀರಿಲ್ಲ ಎನ್ನುವ ಹಾಗೆ ಅನುದಾನಕ್ಕಾಗಿ ಕಾಯಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಲೇವಡಿ ಮಾಡಿದ್ರು. ಯಡಿಯೂರಪ್ಪ ಸಿಎಂ ಆದ‌ ಮೇಲೆ ಎರಡು ಬಾರಿ ಗೋಲಿಬಾರ ಆಯಿತು. ಮೊದಲು ಒಮ್ಮೆ ಆಯಿತು. ಡಿಜೆ ಹಾಗೂ ಕೆಜಿ ಹಳ್ಳಿಯಲ್ಲಿ ಪೊಲೀಸ್, ಸರಕಾರದ ವೈಫಲ್ಯವಿದೆ. ದೂರು ನೀಡಿದ ತಕ್ಷಣ ಕ್ರಮ ಕೈಗೊಂಡಿದ್ದರೆ ಗಲಭೆ ನಡೆಯುತ್ತಿರಲಿಲ್ಲ ಎಂದ ಸಿದ್ದರಾಮಯ್ಯ, ತಮಿಳನಾಡಿನಲ್ಲಿ, ತೆಲಂಗಾಣ, ಆಂದ್ರಪ್ರದೇಶದ, ಪಂಜಾಬಿನಲ್ಲಿ ಇವರ ಪಾರ್ಟಿ ಇದೆಯೋ.. ಎಂದು ಪ್ರಶ್ನೆ ಮಾಡಿದ್ರು. ಕರ್ನಾಟಕದಲ್ಲಿ ವಾಮಮಾರ್ಗದ ಮೂಲಕ ಬಿಜೆಪಿಯವ್ರು ಅಧಿಕಾರಕ್ಕೆ ಬಂದಿದ್ದಾರೆ. ಇವರಿಗೆ ಜನ ಬೆಂಬಲ ಇಲ್ಲವೇ ಇಲ್ಲ ಎಂದು ಮಾತಿನುದ್ದಕ್ಕೂ ವಾಗ್ದಾಳಿ ನಡೆಸಿದ್ರು.

error: Content is protected !!