ಕೂಗು ನಿಮ್ಮದು ಧ್ವನಿ ನಮ್ಮದು

೭.೫ ಲಕ್ಷ ಕಿಲೋ ಮೀಟರ್ ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ: ಶ್ರೀರಾಮುಲು

ಬೆಂಗಳೂರು: ಗ್ರಾಮಾಂತರ ಕ್ಷೇತ್ರದಲ್ಲಿ ಇರುವಂತಹ ಸಾರಿಗೆ ಸಮಸ್ಯೆಯ ಕುರಿತಾಗಿ ಸದನ ಕಲಾಪದಲ್ಲಿ ಪ್ರಸ್ತಾಪವಾದಾಗ ಸಾರಿಗೆ ಸಚಿವರಾದ ಶ್ರೀರಾಮುಲು ೭.೫ ಲಕ್ಷ ಕಿಲೋ ಮೀಟರ ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ ಎಂದ್ರು.

ವಿಧಾನಸಭೆಯಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಇದೆ. ಮತ್ತು ಶಾಲಾ,ಕಾಲೇಜುಗಳು ಈಗಾಗಲೇ ಶುರುವಾಗಿದೆ. ಆದ್ರೆ ಇನ್ನೂ ಬಸ್ಸುಗಳ ಕೊರತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಕೊರತೆ ಇದೆ ಎಂದು ಶಾಸಕ ಬಸನಗೌಡ ದದ್ದಲ್ ಪ್ರಸ್ತಾಪ ಮಾಡಿದ್ರು. ಈ ವೇಳೆ ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ ಬಸ್‍ಗಳನ್ನ ಹಾಕಿದ್ದೇವೆ, ಕೆಲ ಗ್ರಾಮಗಳಿಗೆ ಸಮಸ್ಯೆ ಆಗುತ್ತಿದೆ, ಅದನ್ನು ನಾವು ಸರಿಪಡಿಸುತ್ತೇವೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ.

ಬಹಳಷ್ಟು ಕಡೆಗಳಲ್ಲಿ ಈ ಬಗ್ಗೆ ಮನವಿ ಮಾಡಿದಾಗ ಬಸ್ ಸೌಲಭ್ಯ ಕಲ್ಪಿಸಿದ್ದೇವೆ. ಜೊತೆಗೆ ಅಗತ್ಯ ಇರುವಂತಹ ಕಡೆಯಲ್ಲಿ ಬಸ್‍ಗಳನ್ನ ಹಾಕುತ್ತೇವೆ ಎಂದಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ರಾಜ್ಯದ ಎಲ್ಲಾ ಕಡೆ ಬೇಡಿಕೆಗೆ ಅನುಗುಣವಾಗಿ ಬಸ್‍ಗಳ ಸಂಚಾರ ವ್ಯವಸ್ಥೆ ಮಾಡಿದ್ದೇವೆ. ಆದ್ಯತೆ ಮೇರೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ೭.೫ ಲಕ್ಷ ಕಿಲೋ ಮೀಟರ್ ಒಡಿರುವ ಬಸ್‍ಗಳನ್ನು ಬದಲಿಸುತ್ತೇವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

error: Content is protected !!