ಬೆಳಗಾವಿ: ಉತ್ತಮ ಸಮಾಜಕ್ಕಾಗಿ ಹಾಗೂ ಸೌಹಾರ್ದಯುತ ಬದುಕಿಗಾಗಿ ಶ್ರಾವಣ ಮಾಸದ ಪ್ರವಚನಗಳು ನಮ್ಮ ಜೀವನದಲ್ಲಿ ಪ್ರೇರಕ ಶಕ್ತಿಗಳಾಗುತ್ತಿವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಅವರು ತಾಲೂಕಿನ ಸಾಂಬ್ರಾ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಡವಿ ಸಿದ್ದೇಶ್ವರಮಠದ ಶ್ರೀ ಅಡವೀಶ್ವರ ದೇವರು ಅವರ ನೇತೃತ್ವದಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ‘ಆಧ್ಯಾತ್ಮಿಕ ಪ್ರವಚನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರವಚನಗಳು ಮಾನವನ ಬದುಕಿಗೆ ಸಹಕಾರಿಯಾಗಿದ್ದು, ಪ್ರವಚನಗಳನ್ನು ಆಲಿಸುವುದರಿಂದ ಮನೆ-ಮನಗಳಿಗೆ ಶಾಂತಿ ಸಿಗುವುದರಲ್ಲಿ ಬೇರೆ ಮಾತಿಲ್ಲ, ಜೊತೆಗೆ ಹೊಸ ಉಲ್ಲಾಸವನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ರವಾನಿಸುತ್ತಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸುಳೇಭಾವಿಯ ಪೂಜ್ಯರು, ಗ್ರಾಮದ ಹಿರಿಯರು, ಶಿವಾಜಿ ದೇಸಾಯಿ, ನಾಗೇಶಣ್ಣ ದೇಸಾಯಿ, ಸಂಜು ನಾಗುಂಡ ಪಾಟೀಲ, ಸದಾಶಿವ ಪಾಟೀಲ, ಸುರೇಶ ದೇಸಾಯಿ, ಮೋಹನ ನಾಯ್ಕ, ಮಹಿಳಾ ಮಂಡಳದವರು, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.