ಉಡುಪಿ: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 2020 ರಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಪ್ರಧಾನಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ೬೨೯.೩ ಕೋಟಿ ರೂಪಾಯಿ ಅನುಮೋದನೆ ನೀಡಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇನ್ನೂ ಮಹಾರಾಷ್ಟ್ರಕ್ಕೆ ೭೦೧.೦೦ ಕೋಟಿ ನೆರವಿನ ಅನುಮೋದನೆಯನ್ನು SDRF ಮಾನದಂಡನೆ ರಾಜ್ಯ ಸರ್ಕಾರಕ್ಕೆ ನೀಡಿತ್ತು. ಇನ್ನೂ ಅನಾವೃಷ್ಟಿ ಕಾರಣದಿಂದ 2020 ರಲ್ಲಿ ರಾಜಸ್ಥಾನ ಕೃಷಿ ಸಮುದಾಯಕ್ಕೆ ಅಪಾರ ಬೆಳೆ ನಷ್ಟವಾಗಿತ್ತು.
ಜೊತೆಗೆ ಕೇಂದ್ರ ಸರಕಾರವು ಈ ಬೆಳೆ ನಷ್ಟಕ್ಕೆ ನೆರವಿನ ರೂಪದಲ್ಲಿ ೧೧೩.೬೯ ಕೋಟಿ ರೂಪಾಯಿ SDRF ಮಾನದಂಡನೆ ಅಡಿಯಲ್ಲಿ ಅನುಮೋದಿಸಿತ್ತು ಎಂದಿದ್ದಾರೆ. ಇನ್ನೂ
2020,21 ನೇ ವರ್ಷದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಒಟ್ಟು ೬೭.೯೬ ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ವಿಮೆಗೆ ಒಳಪಡಿಸಿಲಾಗಿತ್ತು. ಜೊತೆಗೆ ಈ ಸಾಲಿನ ಖಾರಿಫ್ ಮತ್ತು ರಬಿಯಲ್ಲಾದ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರವು ಒಟ್ಟು ೭೫೦.೧೨ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ರು, ಜೊತೆಗೆ ೧೧.೪೩ ಲಕ್ಷ ರೈತರು ಇದರ ಫಲಾನುಭವವನ್ನು ಪಡೆದಿದ್ರು ಎಂದಿದ್ದಾರೆ. ಇನ್ನೂ ಈ ವಿಷಯದ ಕುರಿತು ಚುಕ್ಕೆ ಗುರಿತನ ಪ್ರಶ್ನೆಗೆ ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆಯವರು ಉತ್ತರಿಸಿದರು.