ಕೂಗು ನಿಮ್ಮದು ಧ್ವನಿ ನಮ್ಮದು

ರಾಜ್ಯದ ಇಬ್ರು ಹಿರಿಯ ನಾಯಕರು ನನಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ: ಕೆ.ಶಿವನಗೌಡ ನಾಯಕ್

ರಾಯಚೂರು: ರಾಜ್ಯದ ಹಲವು ಹಿರಿಯ ನಾಯಕರ ನಿರ್ಣಯದಿಂದ ನನಗೆ ಅನ್ಯಾಯವಾಗಿದೆ. ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ದೇವದುರ್ಗ ಶಾಸಕ ಶಿವನಗೌಡ ನಾಯಕ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ರು. ನನಗಾಗಿರುವ ಅನ್ಯಾಯಕ್ಕೆ ಪಕ್ಷದ ಚೌಕಟ್ಟಿನಲ್ಲಿ ನಾನು ಹೋರಾಟವನ್ನು ಮಾಡುತ್ತೇನೆ ಎಂದು ಕೆ.ಶಿವನಗೌಡ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಕೆ.ಶಿವನಗೌಡ, ರಾಷ್ಟ್ರೀಯ ನಾಯಕರಿಂದ ಸ್ಥಾನಮಾನ ಸಿಕ್ತು. ಆದ್ರೆ ರಾಜ್ಯದ ಕೆಲವು ಹಿರಿಯ ನಾಯಕರು ಬೇಕು ಬೇಕೆಂತಲೇ ನನ್ನ ಸಚಿವ ಸ್ಥಾನ ತಪ್ಪಿಸಿದ್ದಾರೆ. ನಾನು ಹಿರಿಯ ನಾಯಕರ ತುಳಿತಕ್ಕೊಳಗಾಗಿದ್ದೇನೆ ಎಂದು ಕೆ.ಶಿವನಗೌಡ ಹೇಳಿದ್ದಾರೆ.

ಪರಿಶಿಷ್ಟ ಪಂಗಡದವನಾದ ನನಗೆ ದೊಡ್ಡ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡದವರು ಕೆಲವು ಶಾಸಕರಿದ್ದಾರೆ. ಕನಿಷ್ಠ ೩ ಜನರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದ್ರೆ ನಮಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ೧೩ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಕೆ.ಶಿವನಗೌಡ ಹೇಳಿದ್ರು. ಇನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಮುಂದೆಯೂ ಕೂಡ ಮುಖ್ಯಮಂತ್ರಿ ಆಗಲಿದ್ದಾರೆ.

ನಮಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೆ ನ್ಯಾಯ ಒದಗಿಸಬೇಕು. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನಕೊಟ್ರೆ ನಮ್ಮ ಸಮಾಜಕ್ಕೆ ಸಚಿವ ಸ್ಥಾನ ಕೊಟ್ಟ ಹಾಗೆ ಆಗುವುದಿಲ್ಲ. ಸರ್ಕಾರ ರಚನೆಗೆ ಅವರ ಶ್ರಮ ಪರಿಗಣಿಸಿ ಕೊಟ್ಟಂತಾಗುತ್ತದೆ. ಸಮಾಜಕ್ಕೆ ನ್ಯಾಯ ಸಿಕ್ಕಂತಾಗುವುದಿಲ್ಲ. ಎಂದು ಶಿವನಗೌಡ ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!