ಕೂಗು ನಿಮ್ಮದು ಧ್ವನಿ ನಮ್ಮದು

ನನ್ನ ಖಾತೆ ನನಗೆ ತೃಪ್ತಿ ತಂದಿದೆ : ಶಶಿಕಲಾ ಜೊಲ್ಲೆ

ವಿಜಯಪುರ: ನನಗೆ ಅಧಿಕಾರದ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಜೊತೆಗೆ ನನಗೆ ಯಾವ ಖಾತೆಯನ್ನು ಕೊಟ್ಟಿದ್ದಾರೋ ಆ ಖಾತೆಯನ್ನು ನಾನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ನನ್ನ ಉದ್ದೇಶ ಎಂದು ಮುಜರಾಯಿ ಖಾತೆ ಸಚಿವೆಯಾದ ಶಶಿಕಲಾ ಜೊಲ್ಲೆ ಅವರು ಹೇಳಿದ್ದಾರೆ. ಇನ್ನೂ ಇಂದು ಮಹಾಪೂರ ಬರ್ತಿದೆ, ಜೊತೆಗೆ ಕೋವಿಡ್ ಕೂಡಾ ಇದೆ. ಇಂತಹ ಸಂದರ್ಭದಲ್ಲಿ ಅಸಮಾಧಾನ ಪಡುವುದು ಸರಿಯಲ್ಲ.

ಇನ್ನೂ ಕೊಟ್ಟಂತಹ ಜವಾಬ್ದಾರಿಯನ್ನು ನಾನು ಸರಿಯಾಗಿ ನಿಭಾಯಿಸಿ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದ್ರು. ಇನ್ನೂ ರಾಜ್ಯ ಮತ್ತು ಹೊರ ರಾಜ್ಯದ ದೇವಸ್ಥಾನದ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದೇನೆ. ಜೊತೆಗೆ ಹೊರ ರಾಜ್ಯಗಳ ದೇವಸ್ಥಾನಗಳಿಗೆ ತೆರಳುವ ನಮ್ಮ ರಾಜ್ಯದ ಭಕ್ತರಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ನಾವು ಒದಗಿಸುತ್ತೇವೆ ಎಂದು ಭರವಸೆಯನ್ನು ಜೊಲ್ಲೆ ಅವರು ನೀಡಿದ್ರು. ಇನ್ನೂ BJP ಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರಿಗೆ, ಕೆಲಸ ಮಾಡುವವರಿಗೆ ಯಾವ ಖಾತೆ ಇದ್ರೇನು, ಕೆಲಸ ಮಾಡುವ ಇಚ್ಛೆ ಇದ್ದು, ಜನರಿಗೆ ಸ್ಪಂದಿಸುವ ಇಚ್ಛೆ ಇದ್ರೆ ಸಾಕು ಎಂದು ಖಾತೆ ಕ್ಯಾತೆ ತೆಗೆದವರಿಗೆ ಶಶಿಕಲಾ ಜೊಲ್ಲೆ ಅವರು ಟಾಂಗ್ ನೀಡಿದ್ರು.

ಇನ್ನೂ ಎಂತಹದ್ದೆ ಖಾತೆ ಇದ್ರು ಅದರ ಮುಖಾಂತರ ನಾವು ಕೆಲಸ ಮಾಡಬಹುದು. ಜೊತೆಗೆ ಈ ತರಾ ಅಸಮಾಧಾನ ಆಗುತ್ತಿರುವುದು ಅವರವರಿಗೆ ಬಿಟ್ಟ ವಿಷಯ. ಜೊತೆಗೆ ಇದು ಬಹಳ ದೊಡ್ಡ ವಿಷಯವೇನಲ್ಲ. ಇನ್ನೂ ಸ್ವಲ್ಪ ಅಸಮಧಾನವೇನೋ ಎಲ್ಲರಿಗೂ ಇರಬಹುದು. ಆದರೆ ಅದು ನಿವಾರಣೆ ಆಗುತ್ತೆ. ಜೊತೆಗೆ ಎಲ್ಲರೂ ಅವರವರ ಖಾತೆಯನ್ನು ಮುಂದುವರೆಸುತ್ತಾರೆ ಎಂಬ ವಿಶ್ವಾಸವು ನನಗಿದೆ. ಮತ್ತು ಇದನ್ನು ನಮ್ಮ ಪಕ್ಷದ ಹಿರಿಯರು ಬಗೆಹರಿಸುತ್ತಾರೆಂಬ ವಿಶ್ವಾಸವು ಸಹ ನನಗಿದೆ ಎಂದು ಶಶಿಕಲಾ ಜೊಲ್ಲೆ ಅವರು ಹೇಳಿದ್ದಾರೆ.

error: Content is protected !!