ಬೆಂಗಳೂರು: ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್ ಲಾಡ್ ಇಂದು ವಿಧಾನ ಸೌಧದಲ್ಲಿ ತಮ್ಮ ಕಚೇರಿಯನ್ನು ಪ್ರವೇಶಿಸಿ ಕುರ್ಚಿಯಲ್ಲಿ ಆಸೀನರಾಗುವ ಮೊದಲು ವಿಶೇಷ ಪೂಜೆ ಮಾಡಿಸುವಾಗ ಅವರ ಕುಟುಂಬ ಜೊತೆಗಿತ್ತು.
ಪೂಜೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮಂಗಳಮುಖಿಯರು ಅರ್ಜಿಯೊಂದನ್ನು ಸಚಿವರಿಗೆ ಸಲ್ಲಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ, ಗಾಯಕಿ ಮತ್ತು ಮೋಟಿವೇಷನಲ್ ಸ್ಪೀಕರ್ ಅಕ್ಕೈ ಪದ್ಮಶಾಲಿ ಅವರು ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಮನವಿ ಪತ್ರವನ್ನು ಸಚಿವ ಲಾಡ್ ಗೆ ಸಲ್ಲಿಸಿದರು.