ಬೆಂಗಳೂರು: ಬಹುಭಾಷಾ ನಟಿ ಆಗಿರುವ ಸಾಯಿ ಪಲ್ಲವಿ ಟಾಲಿವುಡ್‍ನಲ್ಲಿ ಸಖತ್ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ತೊಡಗಿದ್ದಾರೆ. ತಮ್ಮ ಸಹಜ ಸೌಂದರ್ಯದ ಮೂಲಕವೇ ಜನರನ್ನು ಗೆದ್ದಿರುವ ನಟಿ ಸಾಯಿ ಪಲ್ಲವಿ ಇದೀಗ ಸ್ಯಾಂಡಲ್‍ವುಡ್‍ಗೂ ಎಂಟ್ರಿ ಕೊಡುತ್ತಿದ್ದಾರೆ.
ಸಾಯಿ ಪಲ್ಲವಿ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಚಿತ್ರ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ.
ಸೆಪ್ಟೆಂಬರ್ ೧೦ಕ್ಕೆ ಈ ಚಿತ್ರ ತೆರೆ ಕಾಣುತ್ತಿದೆ. ಇದೆಲ್ಲದರ ಮಧ್ಯೆ ಕನ್ನಡಿಗರಿಗೆ ಇನ್ನೊಂದು ಸಂತೋಷದ ವಿಚಾರ ಸಿಕ್ಕಿದೆ. ನಟಿ ಸಾಯಿ ಪಲ್ಲವಿ ಸ್ಯಾಂಡಲ್‍ವುಡ್‍ಗೆ ಕಾಲಿಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಮಾಹಿತಿ ಈಗ ಎಲ್ಲೆಡೆ ಲಭ್ಯವಾಗಿದೆ. ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಮಂಸೋರೆ ಸ್ಟೋರಿ ಕೇಳಿ ಸಾಯಿ ಪಲ್ಲವಿ ಸಖತ್ ಖುಷಿ ಪಟ್ಟಿದ್ದಾರೆ.
ಜೊತೆಗೆ ಸಾಯಿ ಪಲ್ಲವಿ ಫೈನಲ್ ಸ್ಕ್ರಿಪ್ಟ್ ಕಳುಹಿಸಲು ಹೇಳಿದ್ದಾರೆ. ಸಾಯಿ ಪಲ್ಲವಿ ನಾನು ವಿವಾಹಕ್ಕೋಸ್ಕರ ಬ್ರೇಕ್ ತೆಗೆದುಕೊಂಡಿದ್ದೆ. ಆದಷ್ಟು ಬೇಗ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ರು. ಆ್ಯಕ್ಟ್ ೧೯೭೮ ಚಿತ್ರದ ಮೂಲಕ ನಿರ್ದೇಶಕ ಮಂಸೂರೆ ಜನಪ್ರಿಯರಾಗಿದ್ದಾರೆ. ಕೋವಿಡ್ ಮೊದಲ ಅಲೆಯ ಲಾಕ್‍ಡೌನ್ ನಂತರ ಈ ಚಿತ್ರವನ್ನು ರಿಲೀಸ್ ಮಾಡಿ ಸಕ್ಸೆಸ್ ಆಗಿದ್ದಾರೆ.
ಇನ್ನೂ ಸಿನಿಮಾ ಸಹ ಒಳ್ಳೆಯ ಗಳಿಕೆ ಮಾಡಿತ್ತು. ಇದು ಟಾಲಿವುಡ್ ಅಂಗಳಕ್ಕೂ ತಲುಪಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ರು. ಹಾಗಾಗಿ ತೆಲುಗು ಮತ್ತು ಹಿಂದಿಯಲ್ಲಿ ಈ ಸಿನಿಮಾ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು. ಹರಿವು, ನಾತಿಚರಾಮಿ ಮತ್ತು ಇತ್ತೀಚೆಗೆ ಆ್ಯಕ್ಟ್ ೧೯೭೮ ಚಿತ್ರ ಮಂಸೋರೆ ಅವರಿಗೆ ಉತ್ತಮ ಹೆಸರು ತಂದು ಕೊಟ್ಟಿವೆ. ಇದೆಲ್ಲದರ ನಡುವೆ ಬ್ರೇಕ್ ಪಡೆದಿದ್ದ ಮಂಸೋರೆ ಆಗಸ್ಟ್ ೧೫ರಂದು ತಮ್ಮ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ.
ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದಲ್ಲಿ ಕುಟುಂಬಸ್ಥರು ಮತ್ತು ಕೆಲವೇ ಆಪ್ತರು ಮಾತ್ರ ಭಾಗವಹಿಸಿದ್ರು. ಇದೀಗ ಮದುವೆಯ ನಂತರ ಮತ್ತೆ ಕೆಲಸದಲ್ಲಿ ತೊಡಗಿದ್ದಾರೆ. ಬಳಿಕ ಸಾಯಿ ಪಲ್ಲವಿ ಅವರಿಗೆ ಕಾಲ್ ಮಾಡಿ ಕಥೆ ಹೇಳಿದ್ದಾರೆ. ಆದ್ರೆ ಕಥೆ ಹೇಗಿದೆ, ಸಾಯಿ ಪಲ್ಲವಿ ಒಪ್ಪುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.