ಜೈಪುರ: ರಾಜಸ್ಥಾನ ಉಪ ಮುಖ್ಯಮಂತ್ರಿಯಾಗಿರುವ ಸಚಿನ್ ಪೈಲಟ್ ಅವರು BJP ಸೇರುತ್ತಾರಾ ಎಂಬ ಪ್ರಶ್ನೆ ಈಗ ಎಲ್ಲೆಡೆ ಎದ್ದಿದೆ. ಹೌದು BJP ಯ ರಾಷ್ಟ್ರೀಯ ಉಪಾಧ್ಯಕ್ಷ A.P ಅಬ್ದುಲ್ ಕುಟ್ಟಿ ಹೇಳಿರುವ ಹೇಳಿಕೆಯಿಂದ ಈ ಪ್ರಶ್ನೆ ಈಗ ಎಲ್ಲೆಡೆ ಇದ್ದಿದೆ. ಇನ್ನೂ ರವಿವಾರ ಮಾತನಾಡಿರುವ ಅವರು ಸಚಿನ್ ಪೈಲಟ್ ಅವರು ಉತ್ತಮ ನಾಯಕ ಜೊತೆಗೆ ಅವರು ಭವಿಷ್ಯದಲ್ಲಿ BJP ಸೇರಬಹುದು ಎಂದು ನಾನು ಊಹಿಸುತ್ತೇನೆ ಎಂದಿದ್ದಾರೆ. ಇನ್ನೂ ಈ ಮಾತನ್ನು ಸಚಿನ್ ಪೈಲಟ್ ಅವರು ತಿರಸ್ಕರಿಸಿದರು. ನಾನು BJP ಸೇರುವುದಿಲ್ಲ ಎಂದರು.
ಇನ್ನೂ ಈ ಹಿಂದೆಯೇ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ನಡೆಯಿಂದ ಅಸಮಾಧಾನಗೊಂಡು BJP ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು ಆದರೆ ಕಳೆದ ವರ್ಷ ರಾಜಸ್ಥಾನ ಕ್ಯಾಬಿನೆಟ್ ವಿಸ್ತರಣೆಯ ಸಂದರ್ಭದಲ್ಲಿ ನನ್ನ ಆಪ್ತರಾಗಿರುವ ೧೮ ಮಂದಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಪೈಲಟ್ ಹೇಳಿದ್ರು. ಜೊತೆಗೆ ಈ ಬೇಡಿಕೆಯನ್ನು ಅಶೋಕ್ ಗೆಹ್ಲೋಟ್ ಅವರು ಒಪ್ಪಿರಲಿಲ್ಲ. ಇನ್ನೂ ಹೀಗಾಗಿ ಗೆಹ್ಲೋಟ್ ವಿರುದ್ಧ ಮುನಿಸುಕೊಂಡಿದ್ದ ಸಚಿನ್ ಪೈಲಟ್ ಅವರು BJP ಸೇರುತ್ತಾರೆ ಎಂಬ ಮಾತುಗಳು ಎಲ್ಲಡೆ ಕೇಳಿ ಬರುತ್ತಿತ್ತು. ಇನ್ನೂ ಈ ಕಿತ್ತಾಟಗಳು ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಹೈಕಮಾಂಡ್ ಸಚಿನ್ ಪೈಲಟ್ ಆಪ್ತರಿಗೆ ಮಂತ್ರಿಸ್ಥಾವನ್ನು ನೀಡಿ ಭಿನ್ನಮತವನ್ನು ಶಮನ ಮಾಡಿತ್ತು.