ಕೂಗು ನಿಮ್ಮದು ಧ್ವನಿ ನಮ್ಮದು

RSS ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ : ಮಹಾಂತೇಶ್ ಕವಟಗಿಮಠ

ಚಿಕ್ಕೋಡಿ: ಜಾತಿ,ಜಾತಿ ಮತ್ತು ಧರ್ಮ,ಧರ್ಮದ ನಡುವೆ ದ್ವೇಷವನ್ನು ಹುಟ್ಟುಹಾಕುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ RSS ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಚಿಕ್ಕೋಡಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ, ವಿವಿಧ ಕಾಮಗಾರಿಗಳಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಜೊತೆಗೂಡಿ ಉದ್ಘಾಟನೆ ನೆರವೇರಿಸಿದ್ರು. ತದನಂತರ ಮಾದ್ಯಮದವರ ಜೊತೆಗೆ ಮಾತನಾಡಿದ ಮಾಹಾಂತೇಶ್ ಕವಟಗಿಮಠ, ಇತ್ತೀಚಿಗೆ ಮಾಜಿ ಸಿಎಂ ಸಿದ್ದರಾಮಯ್ಯ RSS ನಡುವಳಿಕೆ ತಾಲಿಬಾನಿಗಳ ತರ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಹಿಂದು ಪರವಾಗಿ ಇರುವ ಪಕ್ಷ ಅಂದ್ರೆ ಅದು ಕೇವಲ ಭಾರತೀಯ ಜನತಾ ಪಕ್ಷ, ಭಾರತ ದೇಶ ಅಖಂಡವಾಗಿರುವ ಹಿಂದೂ ದೇಶ, ಇಲ್ಲಿರುವ ಎಲ್ಲಾ ರಾಷ್ಟ್ರೀಯ ಜನರು ಸೌಹಾರ್ದತೆಯಿಂದ ಬದುಕಬೇಕೆಂಬುದು ನಮ್ಮ ಪಕ್ಷದ ಉದ್ದೇಶ.

ಆದ್ರೆ ಕಾಂಗ್ರೆಸ್ ಪಕ್ಷ ಮತ ಮತಗಳ ನಡುವೆ ಹಾಗೂ ಧರ್ಮ ಧರ್ಮದ ನಡುವೆ ದ್ವೇಷವನ್ನು ಹುಟ್ಟುಹಾಕುವ ಕೆಲಸವನ್ನು ಮಾಡುತ್ತಿದೆ ಎಂದು ಮಾಹಾಂತೇಶ್ ಕವಟಗಿಮಠ ಕೆಂಡ ಕಾರಿದ್ರು.RSS ಬಗ್ಗೆ ಮಾತನಾಡುವ ನೈತಿಕ ಹಕ್ಕು ಮಾಜಿ ಸಿಎಂ ಸಿದ್ದರಾಮಯ್ಯಗಿಲ್ಲ. ಸಿದ್ದರಾಮಯ್ಯ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಹೋಗಿ ಅಧಿಕಾರ ಕಳೆದುಕೊಂಡ್ರು. ಭಾರತೀಯ ಜನತಾ ಪಕ್ಷ ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದತೆಯಿಂದ ಮತ್ತು ವಿಶ್ವಾಸ ಹೊಂದಿರುವ ಪಕ್ಷ ಹಾಗಾಗಿ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ ಎಂದು ತಿಳಿಸಿದ್ರು.

ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಿ, 2 ಕ್ಷೇತ್ರಗಳಲ್ಲಿ BJP ಜಯಭೇರಿ ಬಾರಿಸುತ್ತೆ. ಎಂದು ಅವರು ಕಾಗವಾಡ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಪರ್ವ ಶುರುವಾಗಿದೆ ಒಂದೇ ದಿನ ಒಂದೇ ಗ್ರಾಮದಲ್ಲಿ ೨೨ ಕಾಮಗಾರಿಗಾಗಿ ಚಾಲನೆ ನೀಡಲಾಗಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ರು.

error: Content is protected !!