ಬೆಂಗಳೂರು: ಇಂದಿನಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ನಿನ್ನೆ ಸಂಜೆ 2ನೇ ಪರಿಷ್ಕೃತ ಆದೇಶ ಹೊರಡಿಸಿದೆ. ಮೊದಲ ಆದೇಶದಲ್ಲಿ ಲಾಕ್ ಡೌನ್ ಇರುವ 11 ಜಿಲ್ಲೆಗಳ ಶಿಕ್ಷಕರು ಶಾಲೆಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ತಿಳಿಸಲಾಗಿತ್ತು.
ಇದೀಗ ನಿನ್ನೆ ಮಾಡಿರುವ ಪರಿಷ್ಕೃತ ಆದೇಶದಲ್ಲಿ, ಲಾಕ್ ಡೌನ್ ತೆರವುಗೊಳಿಸಲಾಗಿರುವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಆದರೆ ಲಾಕ್ ಡೌನ್ ಇರುವ ಜಿಲ್ಲೆಯಲ್ಲಿ ಸಧ್ಯ ವಾಸಿಸುತ್ತಿರುವವರಿಗೆ ಕೂಡ ಜೂನ್ 21ರ ವರಗೆ ಶಾಲೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಶಿಕ್ಷಕರು ಸಧ್ಯ ಇರುವ ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದಲ್ಲಿ ಅಂತವರು ತಾವು ಕೆಲಸ ನಿರ್ವಹಿಸುವ ಜಿಲ್ಲೆಗೆ ಸಂಚಾರ ಮಾಡಲು ಬಸ್ ಸೌಲಭ್ಯ ಸೇರಿದಂತೆ ವಿವಿಧ ರೀತಿಯ ತೊಂದರೆಯಾಗುವ ಹಿನ್ನೆಲೆಯಲ್ಲಿ ಇಲಾಖೆ ಈ ವಿನಾಯಿತಿ ನೀಡಿದೆ.
ಶಿಕ್ಷಣ ಸಚಿವ ಸುರೇಶ ಕುಮಾರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಪರಿಷ್ಕೃತ ಆದೇಶವನ್ನು ಅಪ್ ಲೋಡ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಧ್ಯಕ್ಕೆ ಎಲ್ಲ ಶಿಕ್ಷಕರಿಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬೇಕೆಂದು ಮನವಿ ಮಾಡಿವವರಿದ್ದು, ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.