ಕೂಗು ನಿಮ್ಮದು ಧ್ವನಿ ನಮ್ಮದು

7925 ಮತಗಳಿಂದ ರೇಣುಕಾಚಾರ್ಯಗೆ ತೀವ್ರ ಹಿನ್ನಡೆ!

ಬಿಜೆಪಿಯ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ, ಬಿಜೆಪಿ ಐದು ಸ್ಥಾನ ಗೆದ್ದು ವಿಜಯಮಾಲೆ ಧರಿಸಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಪರವಾದ ವಾತಾವರಣ ಇಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು. ಈ ವಿಚಾರ ರಾಜ್ಯದಲ್ಲಿ ಬಿಜೆಪಿ ತಲೆತಗ್ಗಿಸುವಂತೆ ಮಾಡಿದೆ. ಇವೆಲ್ಲದರ ಆಧಾರವನ್ನಿಟ್ಟುಕೊಂಡು ಮತದಾರ ಯಾವ ಕಡೆ ತನ್ನ ಒಲವು ತೋರಿಸಲಿದ್ದಾನೆ ಎಂದು ಕಾದುನೋಡಬೇಕಿದೆ.

ದಾವಣಗೆರೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಿವೆ. ಅವುಗಳೆಂದರೆ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಚನ್ನಗಿರಿ, ಮಾಯಕೊಂಡ ಹಾಗೂ ಹೊನ್ನಾಳಿ ವಿಧಾನಸಭೆ ಕ್ಷೇತ್ರಗಳು. ಇದರಲ್ಲಿ ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, ಮಿಕ್ಕೆಲ್ಲವೂ ಸಾಮಾನ್ಯ ಮೀಸಲು ಕ್ಷೇತ್ರಗಳಾಗಿವೆ.

2018ರ ಫಲಿತಾಂಶ :

BJPಯ ಎಸ್ ಎ ರವೀಂದ್ರನಾಥ್ ಪಡೆದ ಮತಗಳು 76,540
ಕಾಂಗ್ರೆಸ್ ನ ಎಸ್ ಎಸ್ ಮಲ್ಲಿಕಾರ್ಜುನ್ ಪಡೆದ ಮತಗಳು 72,469 JD(S)ನ ವಡ್ಡನಹಳ್ಳಿ ಶಿವಶಂಕರ್ ಪಡೆದ ಮತಗಳು 5,381 ಅಂದರೆ ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಎಸ್ ಎ ರವೀಂದ್ರನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ಧ 4,071 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದಾಗಿ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಇದೇ ಕಾರಣದಿಂದ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿದ್ದಾರೆ. ಇನ್ನೊಂದೆಡೆ ಶಾಮನೂರು ಶಿವಶಂಕರಪ್ಪ ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಕಾಂಗ್ರೆಸ್ ಮತ್ತೊಮ್ಮೆ ಟಿಕೆಟ್ ನೀಡಿದೆ.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

ಕಾಂಗ್ರೆಸ್ – ಎಸ್ ಎಸ್ ಮಲ್ಲಿಕಾರ್ಜುನ,
ಬಿಜೆಪಿ – ಲೊಕ್ಕಿರೆ ನಾಗರಾಜ್,
ಆಮ್ ಆದ್ಮಿ – ಶ್ರೀಧರ್ ಪಾಟೀಲ್,


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

ಕಾಂಗ್ರೆಸ್ – ಎಸ್ ಎಸ್ ಮಲ್ಲಿಕಾರ್ಜುನ,
ಬಿಜೆಪಿ – ಲೊಕ್ಕಿರೆ ನಾಗರಾಜ್,
ಆಮ್ ಆದ್ಮಿ – ಶ್ರೀಧರ್ ಪಾಟೀಲ್,
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ

ಸದ್ಯ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸಿದ್ದು, 7ನೇ ಸುತ್ತಿನಲ್ಲಿ ಶಾಮನೂರು ಶಿವಶಂಕರಪ್ಪ 17077 ಮತಗಳ ಲೀಡ್ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಅಜಯಕುಮಾರ್ ಗೆ ಇರುವರೆಗೆ 24478 ಮತಗಳು ಇವೆ.

2018ರ ಫಲಿತಾಂಶ :

ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ಪಡೆದ ಮತಗಳು-71,369
ಬಿಜೆಪಿಯ ಯಶವಂತರಾವ ಜಾಧವ್ ಪಡೆದ ಮತಗಳು 55,485

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

2018ರ ಫಲಿತಾಂಶ :

ಕಾಂಗ್ರೆಸ್ – ಶಾಮನೂರು ಶಿವಶಂಕರಪ್ಪ
ಬಿಜೆಪಿ – ಅಜಯ್ ಕುಮಾರ್,
ಜೆಡಿಎಸ್ – ಅಮಾನುಲ್ಲಾ ಖಾನ್,
ಹರಿಹರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಎಂದೇ ಖ್ಯಾತಿ ಪಡೆದ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೆ ಗೆದ್ದಿರುವುದು ಕೇವಲ ಒಂದು ಬಾರಿ. ಈ ಬಾರಿ ಕೂಡ ಕಾಂಗ್ರೆಸ್ ನ ಎನ್ ಎಚ್ ಶ್ರೀನಿವಾಸ್ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ನ ಎಸ್ ರಾಮಪ್ಪ ಪಡೆದ ಮತಗಳು 64,841
ಬಿಜೆಪಿಯ ಬಿ ಪಿ ಹರೀಶ್ ಪಡೆದ ಮತಗಳು 57,541
ಜೆಡಿಎಸ್ ನ ಎಚ್ ಎಸ್ ಶಿವಶಂಕರ್ ಪಡೆದ ಮತಗಳು 38,204 ಹರಿಹರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ ಪಿ ಹರೀಶ್‌, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎನ್‌ ಎಚ್‌ ಶ್ರೀನಿವಾಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌ ಎಸ್‌ ಶಿವಶಂಕರ್‌ ಚುನಾವಣಾ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಮತದಾರರದ್ದೇ ಹೆಚ್ಚಿದ್ದು, ಈ ಬಾರಿ ಯಾರ ಅದೃಷ್ಟ ಕೈಹಿಡಿಯಲಿದೆ ಎಂದು ಕಾದು ನೋಡಬೇಕಿದೆ.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

ಕಾಂಗ್ರೆಸ್ – ಎನ್‌ ಎಚ್‌ ಶ್ರೀನಿವಾಸ್‌
ಬಿಜೆಪಿ – ಬಿ ಪಿ ಹರೀಶ್‌,

ಜೆಡಿಎಸ್- ಎಚ್‌ ಎಸ್‌ ಶಿವಶಂಕರ್‌

ಚನ್ನಗಿರಿ ವಿಧಾನಸಭಾ ಕ್ಷೇತ್ರ

2018ರ ಫಲಿತಾಂಶ :

ಬಿಜೆಪಿಯ ಮಾಡಾಳು ವಿರೂಪಾಕ್ಷಪ್ಪ ಪಡೆದ ಮತಗಳು 73,794 ಕಾಂಗ್ರೆಸ್ ನ ವಡ್ನಾಳ್ ರಾಜಣ್ಣ ಪಡೆದ ಮತಗಳು 48,014 ಜೆಡಿಎಸ್ ನ ಹೂಡಿಗೆರೆ ರಮೇಶ್ ಪಡೆದ ಮತಗಳು 29,106 ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಚನ್ನಗಿರಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇವರು ಬಿಜೆಪಿ ಬಂಡಾಯ ಅಭ್ಯರ್ಥಿ.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

ಕಾಂಗ್ರೆಸ್ – ಬಸವರಾಜ ಬಿ ಶಿವಗಂಗಾ,
ಬಿಜೆಪಿ – ಶಿವಕುಮಾರ್ .
ಜೆಡಿಎಸ್ – ತೇಜಸ್ವಿ ಪಾಟೀಲ್
ಮಾಯಕೊಂಡ ವಿಧಾನಸಭಾ ಕ್ಷೇತ್ರ

2018ರ ಫಲಿತಾಂಶ :

ಬಿಜೆಪಿಯ ಎನ್ ಲಿಂಗಣ್ಣ ಪಡೆದ ಮತಗಳು 50,556
ಕಾಂಗ್ರೆಸ್ ನ ಕೆ ಎಸ್ ಬಸವರಾಜ ಪಡೆದ ಮತಗಳು 44,098
ಪಕ್ಷೇತರದ ಆನಂದಪ್ಪ ಎಚ್ ಪಡೆದ ಮತಗಳು 27,321
ಮಾಯಕೊಂಡ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ಹೇಳಬಹುದು. ಇನ್ನು ಇದು ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿದೆ. 1994ರಿಂದಲೂ ಸತತವಾಗಿ ಗೆದ್ದಿರುವ ಬಿಜೆಪಿ, 2013ರಲ್ಲಿ ಕೆಜೆಪಿ ಸ್ಥಾಪನೆಯಾದ ಕಾರಣಕ್ಕೆ ಕಾಂಗ್ರೆಸ್‌ ಅಭ್ಯ್ರರ್ಥಿ ಗೆಲ್ಲಲು ಹಾದಿ ಮಾಡಿಕೊಟ್ಟಿತ್ತು. ಜೊತೆಗೆ ಇಲ್ಲಿ ವೀರಶೈವ ಲಿಂಗಾಯತ ಮತಗಳೇ ಹೆಚ್ಚಾಗಿದ್ದು, ಬಿಜೆಪಿಯೂ ಹಾಲಿ ಶಾಸಕರಿಗೆ ಟಿಕೆಟ್‌ ನೀಡದೆ 2008ರಲ್ಲಿ ಶಾಸಕರಾಗಿದ್ದ ಎಂ ಬಸವರಾಜ ನಾಯ್ಕ ಅವರನ್ನು ಕಣಕ್ಕಿಳಿಸಿದೆ.

2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

ಕಾಂಗ್ರೆಸ್ – ಕೆ ಎಸ್ ಬಸವರಾಜು,
ಬಿಜೆಪಿ – ಬಸವರಾಜ ನಾಯಕ್,

ಜೆಡಿಎಸ್ – ಆನಂದಪ್ಪ,

ಹೊನ್ನಾಳಿ ವಿಧಾನಸಭಾ ಚುನಾವಣಾ ಕ್ಷೇತ್ರ

2018ರ ಫಲಿತಾಂಶ :

ಬಿಜೆಪಿಯ ಎಂಪಿ ರೇಣುಕಾಚಾರ್ಯ ಪಡೆದ ಮತಗಳು 80,624 ಕಾಂಗ್ರೆಸ್ ನ ಡಿ ಜಿ ಶಾಂತನಗೌಡ ಪಡೆದ ಮತಗಳು 76,391 ಬಿಎಸ್‌ಪಿಯ ಸತ್ಯ ನಾರಾಯಣ ರಾವ್ ಮತಗಳು 1,395

7925 ಮತಗಳಿಂದ ರೇಣುಕಾಚಾರ್ಯಗೆ ತೀವ್ರ ಹಿನ್ನಡೆ.

ಹೊನ್ನಾಳಿಯಲ್ಲಿ ಕಾಂಗ್ರೆಸ್ ಮುನ್ನಡೆ.

ಕೈ ಅಭ್ಯರ್ಥಿ ಶಾಂತನಗೌಡಗೆ 31,381 ಮತ.

ರೇಣುಕಾಚಾರ್ಯಗೆ 23,456 ಮತಗಳು
2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು :

ಕಾಂಗ್ರೆಸ್ – ಡಿ.ಜಿ ಶಾಂತನಗೌಡ,
ಬಿಜೆಪಿ – ಎಂಪಿ ರೇಣುಕಾಚಾರ್ಯ,
ಜೆಡಿಎಸ್ – ಎಚ್.ಎಲ್ ವೆಂಕಟೇಶ್,

error: Content is protected !!