ಸುಭಾನಿ ಎಂ ಹುಕ್ಕೇರಿ ಬೆಳಗಾವಿ: ಒಂದಡೆ ಕೊವೀಡ್ ಸಂಕಷ್ಟದಲ್ಲಿ ಕೆಲಸ ಇಲ್ಲದೆ ಪರದಾಡುವ ಸಾಕಷ್ಟು ಜನರು ನಮ್ಮಗೆ ಕಾಣಸಿಗುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಸಂಜೀವಿನಿ ಆಗಿದೆ. ದುಡಿಯುವ ಕೈ ಗಳಿಗೆ ಕೆಲಸವನ್ನು ನೀಡುವ ಯೋಜನೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಿ ಅವರಿಗೆ ವೇತನ ನೀಡಿ ಅವರ ಜೀವನ ನಿರ್ವಹಣೆಗೆ ಆಸರೆಯಾಗಿದೆ.
ಇನ್ನು ಕುಂದಾನಗರಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಶ್ರೀಕಾಂತ ಎಂಬ ಅಂಧ ಯುವಕ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಸೈ ಎನ್ನಿಸಿಕೊಂಡು ತನ್ನ ಕಾಯಕದಲ್ಲಿ ನಿರತನಾಗಿದ್ದಾನೆ. ಈ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ದುಡಿದು ತನ್ನ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಶ್ರೀಕಾಂತ ಎಂಬುವರು.
ಇನ್ನು ಶ್ರೀಕಾಂತ ಸಾಹೇಬ್ರ್ ನಾನು ಹುಟ್ಟಿನಿಂದ ಅಂಧ ನನ್ನ ಎಡಗಣ್ಣು ಕಾಣುವುದಿಲ್ಲಾ ವಯಸ್ಸು 32 ನಾನು ಕಲಿತಿರುವುದು ಬರೀ 4 ನೇತೆ ಇದರಾಗ ಕೆಲಸ ಮಾಡಕ್ಕತ್ತಿ 3 ವರ್ಷ ಆಗೇತ್ತಿ ಮನ್ಯಾಗ 5 ಜನ ಅದಿವಿ ಅವ್ವ, ಅಪ್ಪ, ಅಣ್ಣಾಗೊಳ ಮತ್ತು ಹೆಂಡತಿ ಮಕ್ಕಳು 3 ಜನರ್ರು ಅವರಿಗೆಲ್ಲಾ ನಾನು ದುಡಿದುಕೊಂಡ ಹೋದಮ್ಯಾಲ ಇದ್ರಾಗಿಂದ ಪಗಾರ ನಮ್ಮನ್ನ ಊಟಕ್ಕ ಹಾಕಾಕ್ಕತ್ತೈತಿ ಎಂದು ತಿಳಿಸುತ್ತಿರುವ ಶ್ರೀಕಾಂತ ಕಲ್ಲಪ್ಪ ಕುಂಬಾರ.
ಒಟ್ಟಾರೆ ಆರ್ಥಿಕ ಸಂಕಷ್ಟದಲ್ಲಿ ದುಡಿಯುವ ಕೈಗಳಿಗೆ ಆಸರೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈಗ ಅಂಧನ ಬಾಳಿಗೆ ಕೆಲಸ ನೀಡಿ ಬೆಳಕು ನೀಡಿದ ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತ್ ಅಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.