ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ರೈತ ಮೋರ್ಚಾ ವತಿಯಿಂದ ಗೋಕಾಕ ನಗರದ ಹೊರವಲಯ ಯೋಗಿಕೊಳ್ಳ ರಸ್ತೆ ಮಾರ್ಗದಲ್ಲಿ ಎರಡನೂರು ಸಸಿ ನೇಡುವ ಕಾರ್ಯಕ್ರಮದಲ್ಲಿ ಸಾಹುಕಾರ್ ರಮೇಶ ಜಾರಕಿಹೊಳಿ ಭಾಗವಹಿಸಿ ಸಸಿಗೆ ನಿರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಟಿ.ಆರ್ ಕಾಗಲ, ಮಡ್ದೆಪ್ಪ ತೋಳಿನವರ, ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ,
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಆನಂದ ಮೂಡಲಗಿ, ಸುರೇಶ ಸನದಿ, ರೈತ ಮೋರ್ಚಾ ನಗರ ಅಧ್ಯಕ್ಷ ಸುರೇಶ ಪತ್ತಾರ, ಲಕ್ಷ್ಮಣ ತಳ್ಳಿ, ಮಹಾಂತೇಶ ಜನ್ಮಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೇಯರ, ಮಂಜು ಪ್ರಭುನಟ್ಟಿ, ಕಿರಣ ಡಮಾಮಗರ, ಶಿನು ಗೌಡ, ಸಚಿನ ಕಮಟೇಕರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.