ಬೆಂಗಳೂರು: ಸ್ಯಾಂಡಲ್ವುಡ್ ನಿರ್ಮಾಪಕ ರಮೇಶ್ ಕಶ್ಯಪ್ನವರ ಹನುಮಂತ ನಗರ ಮನೆಯಲ್ಲಿ ಇತ್ತೀಚೆಗಷ್ಟೇ ಕಳ್ಳತನ ಆಗಿತ್ತು. ಇಗ ಪ್ರರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೨ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ
ಚಂದ್ರಶೇಖರ್ ಮತ್ತು ಅಭಿಷೇಕ್ ಬಂಧಿತ ಆರೋಪಿಗಳು. ಆರೋಪಿ ಅಭಿಷೇಕ್ ನಿರ್ಮಾಪಕ ಕಶ್ಯಪ್ ನವರ ಕಾರು ಚಾಲಕನಾಗಿ ಕೆಲಸವನ್ನು ಮಾಡುತ್ತಿದ್ದ. ಇನ್ನೂ ಜುಲೈ ೧೦ ರಂದು ಹನುಮಂತ ನಗರದ ಕಶ್ಯಪ್ ಅವರ ಮನೆಯಲ್ಲಿ ಕಳ್ಳತನ ವಾಗಿತ್ತು.
ಇನ್ನೂ ಇದೇ ವೇಳೆ ೩ ಲಕ್ಷ ರೂಪಾಯಿ. ನಗದು, ೭೧೦ ಗ್ರಾಂ ಚಿನ್ನಾದ ಆಭರಣವನ್ನು ಆರೋಪಿಗಳು ಕದ್ದಿದ್ದರು. ಜೊತೆಗೆ ನಿರ್ಮಾಪಕ ಕಶ್ಯಪ್ ಅವರ ಕಾರು ಚಾಲಕ ಆಗಿದ್ದ ಅಭಿಷೇಕ್ ಲಾಕರ್ ನಕಲಿ ಕೀಲಿ ಮಾಡಿಕೊಂಡಿದ್ದ. ಜೊತೆಗೆ ಸ್ನೇಹಿತ ಚಂದ್ರಶೇಖರಗೆ ಕೀಲಿ ನೀಡಿ ಕಳ್ಳತನ ಮಾಡಿಸಿದ್ದನು. ಇನ್ನೂ ಕದ್ದಿರುವ ಚಿನ್ನದ ಆಭರಣವನ್ನ ಅಡವಿಟ್ಟು ಹಣ ಪಡೆದು ಎಲ್ಲರೂ ದಿಲ್ ದಾರ್ ಲೈಫ್ ನಡೆಸುತ್ತಿದ್ರು. ಇದೀಗ ಹನುಮಂತನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿ ಇರುವ ೩ ಲಕ್ಷ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.