ಕೂಗು ನಿಮ್ಮದು ಧ್ವನಿ ನಮ್ಮದು

ಕುತೂಹಲ ಮೂಡಿಸಿದ ಗೋಕಾಕ್ ಸಾಹುಕಾರ್ ಮೈಸೂರು ಪ್ರವಾಸ, ದೆಹಲಿಯ ಚಾರ್ಟೆಡ್ ಫ್ಲೈಟ್ ಬುಕ್ ಮಾಡಿ ವಿಮಾನದಲ್ಲಿ ಪ್ರಯಾಣ

ಬೆಳಗಾವಿ: ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಮುಂಬೈ ಪ್ರವಾಸ, ಈಗ ಮುಂಬೈ ಪ್ರವಾಸ ಮುಗಿಸಿ ಮೈಸೂರು ಕಡೆ ಸಾಹುಕಾರ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇನ್ನೊಂದು ವಿಶೇಷ ಅಂದರೆ ಸಹೋದರ ಲಖನ್ ಅವರ ಜೊತೆ ಪ್ರಯಾಣಿಸಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಮತ್ತೇ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಗೆ ಸಾಕ್ಷಿ ಆಗುತ್ತಾ ಎಂಬ ಕುತೂಹಲ ಮನೆ ಮಾಡಿದೆ.

ಸಾಹುಕಾರ್ ಸಾಂಬ್ರಾ ಏರ್ಪೋರ್ಟ್ ನಿಂದ ಸ್ಪೆಷಲ್ ಜೆಟ್ ನಲ್ಲಿ ಕಿರಿಯ ತಮ್ಮ‌ ಲಖನ್ ಜಾರಕಿಹೊಳಿ ಹಾಗೂ ಅಳಿಯ ಅಂಬಿರಾವ್ ಪಾಟೀಲ್ ಜೊತೆ ಸೇರಿಕೊಂಡು ಮೈಸೂರಿಗೆ ತೆರಳಿದ ರಮೇಶ ಜಾರಕಿಹೊಳಿ ಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಶ್ರೀಗಳೊಂದಿಗೆ ಚರ್ಚಿಸಲಿದ್ದಾರೆ. ಬಳಿಕ ಶಕ್ತಿದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಸುತ್ತೂರು ಶ್ರೀಗಳೊಂದಿಗೆ ರಮೇಶ ಜಾರಕಿಹೊಳಿ ಯಾವೆಲ್ಲ ವಿಚಾರಗಳನ್ನು ಚರ್ಚಿಸಬಹುದು ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಮೈಸೂರು ಭೇಟಿ ಕುರಿತು ಮಾಧ್ಯಮಗಳು ಪ್ರಶ್ನಿಸಿದ್ರೆ ಯಾವುದೇ ಪ್ರತಿಕ್ರಿಯೆ ನೀಡದೇ ರಮೇಶ ಜಾರಕಿಹೊಳಿ ತೆರಳಿದ್ರು, ಇನ್ನೂ ಲಖನ್ ಜಾರಕಿಹೊಳಿ ಮಾತನಾಡಿ ಸುತ್ತೂರು ಶ್ರೀಗಳ ಭೇಟಿ ಬಳಿಕ ರಮೇಶ ಜಾರಕಿಹೊಳಿ ಮಾತಾಡ್ತಾರೆ ಎಂದಷ್ಟೇ ಹೇಳಿದ್ರು.

error: Content is protected !!